ಬಳ್ಳಾರಿ-  ಬಳ್ಳಾರಿ  ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿಜ 4ರಂದು ಜರುಗಿದ, ಮೀಸಲಾತಿ ಹೋರಾಟ ಪಾದಯಾತ್ರೆಯ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿದ್ದ. ಪಂಚಮಸಾಲಿ ಸಮುದಾಯದ ಕೂಡಲ ಸಂಗಮ ಪೀಠದ ಪೀಠಾಧೀಶ್ವರರಾದ,ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕಳೆದ 25 ವರ್ಷಗಳಿಂದ 2A ಮೀಸಲಾತಿಗಾಗಿ ಸಮುದಾಯ ಹೋರಾಡುತ್ತಿದ್ದು,ಯಾವುದೇ ಸರ್ಕಾರಗಳು ಈವರೆಗೂ ಸ್ಪಂಧಿಸುತ್ತಿಲ್ಲ.ಕೂಡಲಸಂಗಮದಿಂದ ಪಾದಯಾತ್ರೆ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುತ್ತದೆ, ಇದಕ್ಕೂ ಸ್ಪಂಧಿಸದಿದ್ದಲ್ಲಿ ಹೋರಾಟ ತೀವ್ರಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು,ಮೃತ್ಯುಂಜಯ ಸ್ವಾಮೀಜಿಯವರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

Leave A Reply