ಬೆಂಗಳೂರು- ಇತ್ತಿಚಿನ ದಿನಗಳಲ್ಲಿ ಹೊಸ ನಟನಟಿಯರು ಏನೂ ಮಾಡಿದ್ರು ಕೊಂಚ ವಿಭಿನ್ನವಾಗಿಯೇ ಮಾಡುತ್ತಾರೆ. ನಂತ್ರ ಸಿನಿಮಾ ಮಂದಿ ಅದು ಏನೇ ಮಾಡಿದ್ರು ಸಾಕಷ್ಟು ಸುದ್ದಿ ಯಾಗುತ್ತೆ. ಹೌದು ಈಗ ಸುದ್ದಿಯಲ್ಲಿ ಇರುವ ನಟನಟಿ ಅಂದ್ರೆ ಅವರೇ ಆದಿ ಮತ್ತು ನಿಧಿ.

ಕನ್ನಡದ ಸೂಪರ್ ಜೋಡಿ ಎಂದು ಹೆಸರು ಮಾಡಿರುವ  ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕೂಡಾ ಇದಕ್ಕೆ ಹೊರತಾಗಿಲ್ಲ. ಈಗಾಗಲೇ ಈ ಜೋಡಿ ಪ್ರೇಮಿಗಳ ದಿನದಂದು ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆಂದು ನಿಮಗೆಲ್ಲಾ ತಿಳಿದಿರುವ ಸಂಗತಿ.

ವಿಭಿನ್ನವಾಗಿ ಮದುವೆ ಮಾಡಿಕೊಳ್ಳಬೇಕೆಂಬುವುದು ಈ ಜೋಡಿಯ ಕನಸಾಗಿದೆ. ಹೌದು ಮದುವೆಯ ಮಂಟಪವನ್ನು ವಿಭಿನ್ನವಾಗಿ ರೆಡಿ ಮಾಡಿಸಿದ್ದಾರಂತೆ. ಅಂದರೆ ಮದುವೆ ಮಂಟಪವನ್ನು ಸ್ವಿಮಿಂಗ್ ಪೂಲ್ ನ ಮದ್ಯದಲ್ಲಿ ರೆಡಿ ಮಾಡಲಾಗಿದೆಯಂತೆ. ಇದು ಮಿಲನಾ ನಾಗರಾಜ್ ಅವರ ಕನಸಆಗಿದೆಯಂತೆ. ಅವರ ಆಸೆಯಂತೆ ಮದುವೆ ಮಂಟಪದ ನಿರ್ಮಾಣ ಮಾಡಿಸಿದ್ದಾರೆ.

ಎಲ್ಲವನ್ನೂ ವಿಭಿನ್ನವಾಗಿ ಪ್ಲ್ಯಾನ್ ಮಾಡುವ ೀ ಜೋಡಿ, ತಮ್ಮ ಮದುವೆಯ ದಿನಾಂಕವನ್ನು ವಿಭಿನ್ನವಾಗಿ ತಿಳಿಸಿದರು ಹಾಗೆಯೇ ಮದುವೆಯನ್ನು ಕೂಡಾ ಎಲ್ಲರ ಗಮನ ಸೆಳೆಯುವಂತೆ ರೆಡಿ ಮಾಡಿಸಿದ್ದಾರಂತೆ.  ಡಾರ್ಲಿಂಗ್ ಕೃಷ್ಣ ನಟನೆ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಲವ್ ಮಾಕ್ ಟೆಲ್ ಇರಿಗೆ ಹೆಚ್ಚು ಜನಪ್ರಿತೆ ತಂದು ಕೊಟ್ಟಿತು. ಆದಿ ಮತ್ತು ನಿಧಿ ಪಾತ್ರ ಎಲ್ಲರಿಗೂ ಮೆಚ್ಚುಗೆಯ ಪಾತ್ರವಾಯಿತು. ರಿಲ್ ಲೈಪಲ್ಲಿ ಮಾತ್ರವಲ್ಲದೆ  ರಿಯಲ್ ಲೈಪನಲ್ಲಿಯೂ ಇವರು ಒಳ್ಳೆಯ ಜೋಡಿಯಗಿದ್ದಾರೆ.

About Author

Priya Bot

Leave A Reply