ಬಳ್ಳಾರಿ: ಕೊರೊನಾ ನಂತರ ಕೇಂದ್ರ ಸರ್ಕಾರ ಚಿತ್ರಮಂದಿರಗಳ ಪ್ರವೇಶಾತಿಗೆ ಅವಕಾಶ ನೀಡಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಈ ಸಿನಿಮಾ ಮಂದಿರವೊಂದು ಭರ್ಜರಿ ಟಿಕೆಟ್ ಆಫರ್​ ನೀಡುವ ಮೂಲಕ ಪ್ರೇಕ್ಷರನ್ನು ತನ್ನತ್ತ ಸೆಳೆಯು ಪ್ರಯತ್ನಕ್ಕೆ ಮುಂದಾಗಿದೆ.
ಕಳೆದ ಏಳೆಂಟು ತಿಂಗಳಿಂದ ಬಂದ್ ಆಗಿದ್ದ ಚಿತ್ರಮಂದಿರಗಳು ಪ್ರಾರಂಭವಾಗಿದ್ದು, ಸಿನಿಮಾಗಳು ತೆರೆ ಕಾಣುತ್ತಿವೆ. ಆದರೆ ಕೊರೊನಾ ಕಾರಣದಿಂದಾಗಿ ಜನರು ಥಿಯೇಟರ್​ಗೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ನಟರಾಜ ಚಿತ್ರಮಂದಿರದ ಮಾಲೀಕರು ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಆಫರ್​ ನೀಡಿದ್ದಾರೆ. ಬ್ಲಾಕ್ ಬಸ್ಟರ್ ಮೂವೀಸ್ ಬ್ಯಾನರ್ ಅಡಿ ಟಿಕೆಟ್​ ಖರೀದಿಸಿದರೆ ಮತ್ತೊಂದು ಟಿಕೆಟ್​ ಉಚಿತವಾಗಿ ನೀಡುತ್ತಿದ್ದು, ಈ ಮೂಲಕ ಕನ್ನಡ, ತೆಲುಗು ಹಾಗೂ ತಮಿಳು ಸೇರಿ ನಾನಾ ಭಾಷೆಯ ಸಿನಿಮಾಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದಾರೆ.
<span;>ಈ ಕುರಿತು ಪ್ರತಿಕ್ರಿಯಿಸಿದ ನಟರಾಜ ಚಿತ್ರಮಂದಿರದ ಮಾಲೀಕ ಲಕ್ಷ್ಮೀಕಾಂತರೆಡ್ಡಿ ಮಾತನಾಡಿದ್ದು, ಫೆ.10 ರಿಂದ 18ರವರೆಗೆ ಈ ಆಫರ್ ನೀಡಲಾಗಿದೆ. ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಟಿಕೆಟ್​ ಖರೀದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸಿನಿಮಾಗಳು ಬಿಡುಗಡೆಯಾದರೆ ಗುರುವಾರ ಮತ್ತು ಶುಕ್ರವಾರದಂದು ಟಿಕೆಟ್​ಗಳಲ್ಲಿ ವಿಶೇಷ ವಿನಾಯಿತಿ ನೀಡುವ ಚಿಂತನೆ ಇದೆ ಎಂದರು. ಕೋವಿಡ್ ಕಾರಣದಿಂದ ಸಿನಿಮಾ ಮಂದಿರಗಳತ್ತ ಪ್ರೇಕ್ಷಕರು ಸುಳಿಯುತ್ತಿಲ್ಲ ಎಂಬುದು ತಪ್ಪು ಕಲ್ಪನೆ. ಲಾಕ್​​ಡೌನ್ ಎಫೆಕ್ಟ್​​ನಿಂದಾಗಿ ಸಾರ್ವಜನಿಕರು ಸೇರಿದಂತೆ ಎಲ್ಲಾ ರಂಗದಲ್ಲೂ ಆರ್ಥಿಕ ಸಂಕಷ್ಟ ಎದುರಾಗಿದೆ. ಆ ಪೈಕಿ ಸಿನಿಮಾ ಮಂದಿರಗಳೂ ಕೂಡ ಒಂದಾಗಿದೆ. ವ್ಯಾಕ್ಸಿನೇಷನ್‌ ಬಂದಾಗಿದ್ದು, ಕೋವಿಡ್ ಸೋಂಕು ಹರಡುವಿಕೆಯ ಭಯ ಈಗ ಕಾಡುತ್ತಿಲ್ಲ. ಹೀಗಾಗಿ ಕೌಟುಂಬಿಕ ಹಿನ್ನೆಲೆಯುಳ್ಳ ಸಿನಿಮಾಗಳು ಬಿಡುಗಡೆಯಾದರೆ ಖಂಡಿತವಾಗಿಯೂ ಸಿನಿಮಾ ಮಂದಿರಗಳತ್ತ ಕುಟುಂಬಸ್ಥರು ಮುಖ ಮಾಡುತ್ತಾರೆ ಎಂದರು.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply