ಬೆಂಗಳೂರು- ಇತ್ತೀಚಿನ ದಿನಗಳಲ್ಲಿ ಕನ್ನಡದ ನಟರಿಗೆ ಬೇಡಿಕೆ ಹೆಚ್ಚಾಗಿದೆ. ಕೆ ಜಿ ಎಫ್  ಚಿತ್ರ ಬಿಡುಗಡೆ ಹಾಗೂ ಕೆಜಿಎಫ್  ಚಾಪ್ಟರ್ 2 ಟೀಜರ್ ಬಿಡುಗಡೆ ಬಳಿಕ ಕನ್ನಡ ಚಿತ್ರರಂಗ ಮತ್ತಷ್ಟು ಎತ್ತರಕ್ಕೆ ಬೆಳೆದಿದೆ ಕನ್ನಡದ ನಟರು ಬೇರೆ ಭಾಷೆಗಳ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗೆಯೇ ನಟ, ನಿರ್ಮಾಪಕರಾದ ನೀನಾಸಂ ಸತೀಶ್ ಅವರು ಕೂಡಾ ತಮಿಳು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ.

ನಟ ನೀನಾಸಂ ಸತೀಶ್ ಅವರನ್ನು ತಮಿಳು ಸಿನಿಮಾ ರಂಗ ಕೈ ಬಿಸಿ ಕರೆದಿದೆ. ‘ ಪಗೈವಾನುಕ್ಕು ಅರುಲ್ವಾಯ್ ‘ ಚಿತ್ರದ ಮುಖಾಂತರ ತಮಿಳಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ಅನಿಸ್ ಅಬ್ಭಾಸ್ ಅವರು ನಿರ್ದೇಶನ ಮಾಡುತ್ತದ್ದಾರೆ. ಈ ಚಿತ್ರದಲ್ಲಿ ಸತೀಶ್ ಅವರು ಖೈದಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆಂದು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಟೋವನ್ನು ಹರಿ ಬಿಟ್ಟು ಖುಷಿ ಪಟ್ಟಿದ್ದಾರೆ.

ಕನ್ನಡ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿರುವ ನೀನಾಸಂ ಸತೀಶ್, ನಟನಾಗಿ ನಟಿಸಿರುವ ಚಿತ್ರ ಗೋದ್ರಾ ಬಿಡುಗಡೆಗೆ ಸಿದ್ದವಾಗಿದೆ. ಇನ್ನೂ ಇವರು ತಮಿಳು ಸಿನಿಮಾರಂಗದಲ್ಲಿ ಮಿಂಚುತ್ತಾರೆಂದು ತಿಳಿಯಲು ಸಿನಿಮಾ ಬಿಡುಗಡೆ ಆಗುವ ವರೆಗೆ ಕಾಯಬೇಕಾಗುತ್ತದೆ.

About Author

Priya Bot

Leave A Reply