ಸಲಿಂಗಕಾಮಕ್ಕೆ ಬಲಿಯಾದ ಶಿಕ್ಷಕ

0

ದೊಡ್ಡಬಳ್ಳಾಪುರ – ಇತ್ತೀಚೆಗೆ ಗೌರಿಬಿದನೂರು ನಲ್ಲಿ ನಡೆದ ಕೊಲೆ ಪ್ರಕರಣ ಅಲ್ಲಿನ ಜನರನ್ನು ಬೆಚ್ಚಿ ಬೀಳಿಸಿತ್ತು, ಕಾರಣ ಸರ್ಕಾರಿ ಶಾಲಾ ಶಿಕ್ಷಕನನ್ನು ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು, ಆದ್ರೆ ಪ್ರಕರಣ ಬೆಣ್ಣು ಹತ್ತಿದ್ದ ಪೊಲೀಸರಿಗೆ ಆಘಾತಕಾರಿ ವಿಷಯ ಬಹಿರಂಗವಾಗಿ. ಶಿಕ್ಷಕನ ಸಾವಿಗೆ ಸಲಿಂಗಕಾಮ ಕಾರಣ ಎನ್ನುವ ಆಘಾತಕಾರಿ ವಿಷಯ ಬಯಲಾಗಿದೆ.

ಗೌರಿಬಿದನೂರು ಪಟ್ಟಣದಲ್ಲಿ ದುಷ್ಕರ್ಮಿಗಳಿಂದ ಕೊಲೆಗೀಡಾದ ಸರ್ಕಾರಿ ಶಾಲಾ ಶಿಕ್ಷಕ ವಿಶ್ವನಾಥ ತಾನೇ  ಸೃಷ್ಠಿಸಿಕೊಂಡ ಸಲಿಂಗಕಾಮದ ಜಾಲದಲ್ಲಿ ಸಿಲುಕಿ ಹಂತಕರಿಂದ ಬರ್ಬರವಾಗಿ ಕೊಲೆಗೀಡಾಗಿದ್ದಾನೆ. ಗೌರಿಬಿದನೂರು ಪೊಲೀಸರ ತನಿಖೆ ವೇಳೆ ಬಯಲಾಗಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ವಿಶ್ವನಾಥಗೆ ಕೈ ತುಂಬ ಸಂಬಳ ಇತ್ತು, ಮೇಲಾಗಿ ಹೆಂಡತಿ ಜೊತೆ ಸೇರಿ ಕೊಂಡು ಹೊಸ ಬಿಜಿನೆಸ್ ಆರಂಭ ಮಾಡಿದ್ದ, ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಮೋಹ ಹೆಚ್ಚಾಗಿತ್ತು.

ಮಾನಸಿಕವಾಗಿ ಹೆಣ್ಣಿನ ಭಾವನೆಗೆ ತಿರುಗಿದ್ದು ಸಲಿಂಗಕಾಮದ ಚಟ ಸಹ ಬೆಳೆಸಿಕೊಂಡಿದ್ದ. ಇದಕ್ಕಾಗಿ ಸಲಿಂಗಕಾಮದ ಆ್ಯಪ್‌ವೊಂದರಲ್ಲಿ ಸದಸ್ಯ ಕೂಡ ಆಗಿದ್ದನಂತೆ. ಆದರೆ ಆ್ಯಪ್‌ನಲ್ಲಿ ಪರಿಚಯವಾದ ಅಶೋಕ್ ಎಂಬಾತ ಕರೆ ಮಾಡಿ ಸಲಿಂಗಕಾಮಕ್ಕೆ ಕರೆದಿದ್ದಾನೆ. ಹೀಗೆ ಹಲವಾರು ದಿನಗಳಿಂದ ಸಲಿಂಗಕಾಮ ನಡೆಸಿದ್ದಾರೆ.

ಇದೇ ವಿಚಾರಕ್ಕೆ ಕೊಲೆಯಾದ ದಿನ  ವಿಶ್ವನಾಥ ಬೈಪಾಸ್ ಸಮೀಪ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ದೊಡ್ಡಬಳ್ಳಾಪುರದಿಂದ ಆಗಮಿಸಿದ್ದ ಅಶೋಕ್, ಮಂಜುನಾಥ ಅಲಿಯಾಸ್ ಕಿಚ್ ಬಿನ್ ಲಕ್ಷ್ಮೀಪತಿ (26), ಗೌರಿಬಿದನೂರು ನಿವಾಸಿ  ಆರೋಪಿ ಮಧು ಆಲಿಯಾಸ್ ಗಧಮ ಬಿನ್ ರತ್ನಯ್ಯ (24), ಗೌರಿಬಿದನೂರಿನ ನದಿಗಡ್ಡೆಯ ಶ್ರೀಕಾಂತ್ ಅಲಿಯಾಸ್ ಕಾಂತ ಬಿನ್ ವೆಂಕಟೇಶ (21) ಎಂಬುವರು ಕುಡಿದ ಆಮಲಿನಲ್ಲಿ ವಿಶ್ವನಾಥ ಜೊತೆಗೆ ಸಲಿಂಗಕಾಮ ನಡೆಸಿ ಸರ್ಕಾರಿ ಶಿಕ್ಷಕ  ವಿಶ್ವನಾಥ್ ಅವರನ್ನು ಕೊಲೆ ಮಾಡಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply