ಚೆನೈ – ಕ್ರಿಕೇಟ್ ದೇವರು ಎಂದೇ  ಖ್ಯಾತಿಯಾಗಿರುವ ಸಚಿನ್ ತೆಂಡೂಲ್ಕರ್ ಅವರ ಮಗ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈಗ ಅವರ ಮಗ ಈ ವರ್ಷ ನಡೆಯಲಿರುವ ಐಪಿಎಲ್ ನಲ್ಲಿ ಎಷ್ಟು ಮೊತ್ತಕ್ಕೆ ಹಾರಾಜಾಗಿದ್ದಾರೆ ಗೊತ್ತಾ.?  ಈ ವರ್ಷದ ಐಪಿಎಲ್ ಹರಾಜಿನಲ್ಲಿ ಗಮನ ಸೆಳೆದಿದ್ದ ಆಟಗಾರರಲ್ಲಿ ಒಬ್ಬರಾದ ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ . ಹೌದು ಸಚಿನ್ ಅವರ ಪುತ್ರ ₹ 20 ಲಕ್ಷಕ್ಕೆ ಮುಂಬೈ ಫ್ರಾಂಚೈಸಿ ಅರ್ಜುನ್ ತೆಂಡೂಲ್ಕರ್ ಅವರನ್ನು ಖರೀದಿಸಿದ್ದಾರೆ. ಅಪ್ಪ ಆಡಿದ್ದ ತಂಡಕ್ಕೆ ಮಗ ಸಹ ಸೇರ್ಪಡೆಗೊಳ್ಳುತ್ತಿರುವುದು ಮತ್ತೊಂದು  ವಿಶೇಷ…

ಮುಂಬೈ ತಂಡದ ಆಟಗಾರರಾಗಿ, ನಾಯಕರಾಗಿ ತಂಡದ ಜೊತೆ ಸಚಿನ್ ತೆಂಡೂಲ್ಕರ್ ಗುರುತಿಸಿಕೊಂಡಿದ್ದರು. ಮಗನನ್ನು ಮುಂಬೈ ಫ್ರಾಂಚೈಸಿ ಖರೀದಿಸುವ ನಿರೀಕ್ಷೆ ಇತ್ತು.  ಈ ವರ್ಷ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಮುಂಬೈ ಹಿರಿಯ ತಂಡಕ್ಕೆ ಪಾದಾರ್ಪಣೆ ಮಾಡಿದ ಎಡಗೈ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ₹ 20 ಲಕ್ಷ ಮೂಲ ಬೆಲೆಯೊಂದಿಗೆ ಆಲ್‌ರೌಂಡರ್ ವಿಭಾಗದ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಮೂಲ ಬೆಲೆಗೆ ಬಿಕರಿಯಾಗಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply