ಚೆನೈ- ಇನ್ನೇನು ಕೆಲವೇ ದಿನಗಳಲ್ಲಿ ತಮಿಳುನಾಡಿನಲ್ಲಿ ಮತ್ತೊಂದು ಹೊಸ ಪಕ್ಷ ಘೋಷನೆ ಆಗಲಿದೆ ಎನ್ನುವ ಮಾತು ಎಲ್ಲಡೆ ಕೇಳಿಬಂದಿತ್ತು . ಇನ್ನು ಕೆಲವರು ತಲೈವಾ ರಜನಿಕಾಂತ್ ಬಿಜೆಪಿಗೆ ಸೇರುತ್ತಾರೆ ಎನ್ನುವ ಸಂಚಲನ ಮೂಡಿತ್ತು. ಆದ್ರೆ ಈ ಎಲ್ಲ ಗಾಳಿ ಸುದ್ದಿಗೆ ತಲೈವಾ ರಜನಿಕಾಂತ್ ತನ್ನೀರು ಎರಚಿದ್ದಾರೆ. ಹೌದು ರಜನಿಕಾಂತ್ ಅವರು ನಾನು  ರಾಜಕೀಯ ಸೇರುವುದಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಭಾರಿ  ನಿರಾಸೆ ಮಾಡಿದ್ದಾರೆ. ಅದರ ಜೊತೆಗೆ ರಜನಿಕಾಂತ್ ಅವರನ್ನು ಬಿಜೆಪಿ ಕಡೆಗೆಸೆಳುಉವ ಮೂಲಖ ತಮಿಳುನಾಡಿನಲ್ಲಿ ಕಮಲ ಅರಳಿಸಲು ಮುಂದಾಗಿದ್ದ ಬಿಜೆಪಿ ಪಕ್ಷಕ್ಕೂ ತೀವ್ರ ನಿರಾಸೆಗೊಂಡಿದೆ.

ರಜನಿಕಾಂತ್ ಆಸ್ಪತ್ರೆಗೆ ದಾಖಲಾದಾಗಿನಿಂದ ಮತ್ತು ಅವರ ಇತ್ತೀಚಿನ ಪ್ರಾಜೆಕ್ಟ್ ಅಣ್ಣಾಥೆ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಿದಾಗಿನಿಂದಲೂ, ‘ತಲೈವಾರ್’ ಹೊಸ ವರ್ಷದ ಮುನ್ನಾದಿನದಂದು ತಮ್ಮ ಪಕ್ಷದ ನಾಮಕರಣ ಮತ್ತು ಮುಂದಿನ ಕಾರ್ಯಕ್ರಮಗಳನ್ನು ಘೋಷಿಸುವ ಕುರಿತು ಸಂದೇಹಗಳು ಹುಟ್ಟಿಕೊಂಡಿದ್ದವು. ಇದೀಗ ರಜನಿಕಾಂತ್ ರಾಜಕೀಯಕ್ಕೆ ವಿದಾಯ ಹೇಳುವ ಮೂಲಕ ಎಲ್ಲಾ ಸಂದೇಹಗಳಿಗೆ ತೆರೆ ಎಳೆದಿದ್ದಾರೆ.

About Author

Priya Bot

Leave A Reply