ರಾಯಚೂರು – ಸಾಮಾನ್ಯವಾಗಿ ನಾವು ಬಂಗಾರವನ್ನು ಗ್ರಾಮ ತೊಲೆ ಲೆಕ್ಕದಲ್ಲಿ ನೋಡಿದ್ದೆವೆ. ಆದ್ರೆ ಇಲ್ಲಿ ಮಿನಿಸ್ಟರ್ ತಮ್ಮ ಎರಡೂ ಕೈಯಲ್ಲಿ ಬರೋಬ್ಬರಿ 8 ಕೆಜಿ ಬಂಗಾರ ಹಿಡಿದು ಎಲ್ಲರಿಗೂ ತೋರಿಸಿದ್ದಾರೆ. ಅಷ್ಟಕ್ಕೂ ಅವರು ಯಾರು ಎನ್ನುವ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತೆ. ಅವರು ಬೇರೆ ಯಾರೂ ಅಲ್ಲ ನಮ್ಮ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ್ ನಿರಾಣಿ ಅವರು. ಸಂಜೆ 6 ಘಂಟೆಯ ಸುಮಾರಿಗೆ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಗೆ ಭೇಟಿ ನೀಡಿದ  ಸಚಿವ ಮುರುಗೇಶ್ ನಿರಾಣಿ ಅವರು ಚಿನ್ನ ಉತ್ಪಾದನೆ ಮಾದರಿ ಪರಿಶೀಲನೆ ಮಾಡಿದ್ದಾರೆ. ಹಟ್ಟಿ ಚಿನ್ನದ ಗಣಿಯ ಕಾರ್ಮಿಕರು ತಯಾರಿಸಿದ  8 ಕೆಜಿ ತೂಕದ ಚಿನ್ನವನ್ನು ತಮ್ನ ಎರಡೂ ಕೈಯಲ್ಲಿ  ಹಿಡಿದು ಖುಷಿಪಟ್ಟಿದ್ದಾರೆ. ಚಿನ್ನದ ಉತ್ಪಾದನೆಯ ಪ್ರತಿ ಹಂತವನ್ನು ಪರಿಶೀಲನೆ ಮಾಡಿದ ಸಚಿವ ನಿರಾಣಿ ಕೆಲ ಕಾಲ ಹಟ್ಟಿ ಚಿನ್ನದ ಗಣಿ ನೌಕರರ ಜೊತೆಯಲ್ಲಿ ಕಾಲ ಕಳೆದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply