ಸಾಮಾನ್ಯವಾಗಿ ತೆಳು ಮೈಕಟ್ಟು ಹೊಂದಿದವರಿಗೆ ಉತ್ತರ ಕರ್ನಾಟಕದಲ್ಲಿ ಒಂದು ಮಾತಿನಿಂದ ಕರೆಯುತ್ತಾರೆ ಎದೇನಪ್ಪಾ ಅಂದ್ರೆ ಏನ್ ಲೇ ಮುಧೋಳ ನಾಯಿ ಆಗಿಯಲ್ಲಾಅಂಥಾ. ಹೌದು ಈ ನಾಯಿ ತಳಿಯೇ ಹಾಗೆ ನಿಮಗೆ ಮುಧೋಳ ನಾಯಿ ಎಂದಾಕ್ಷಣ ನೆನಪಿಗೆ ಬರುವುದು ಅದರ ಸಣ್ಣ ಮೈಕಟ್ಟು ಎತ್ತರ ದೇಹ ಉದ್ದನೇ ಬಾಲ. ಸದಾಕಾಲ ಬೇಟೆಯಾಡಲು ಸನ್ನದವಾಗೇ ಇರುತ್ತೆ.

ಈ ನಾಯಿ ಸೈನ್ಯಕ್ಕೆ ಸೇರುವ ವಿಷಯ ಈಗಾಗಲೇ ನಿಮಗೆ ಗೊತ್ತಿರುವ ವಿಷಯ ಆದ್ರೆ ಈಗ ಈ ನಾಯಿಯ ತಳಿಯನ್ನು ವಾಯು  ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ವಾಯು ಸೇನೆ ಮುಂದಾಗಿದೆ. ಈ ನಾಯಿ ನಾಲ್ಕು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಈ ನಾಯಿಯನ್ನು ಸೇರಿಸಿಕೊಳ್ಳುವುದರ ಆಲೋಚನೆ ನಡೆದಿತ್ತು. ಅಲ್ಲದೇ ಮೊದಲ ಹಂತದಲ್ಲಿ ಇಲ್ಲಿನ ಆರು ನಾಯಿಗಳನ್ನು ಉತ್ತರಪ್ರದೇಶದಲ್ಲಿರುವ ಮೀರತ್ ನ  ಸೈನಿಕ ಪಶು ತರಬೇತಿ ಕೇಂದ್ರಕ್ಕೆ ಕಳುಹಿಸಿಲಾಗಿತ್ತು ಎಲ್ಲಾ ವೃತುವಿನಲ್ಲಿ ಆರೋಗ್ಯವಾಗಿರುವ ಈ ನಾಯಿಗಳನ್ನು ಈಗಾಗಲೇ ಬಾಂಬ್ ಪತ್ತೆ ಹಚ್ಚುವಿಕೆ, ಪತ್ತೇದಾರಿ, ಅಪರಾಧಿ ಪತ್ತೆ ಹಚ್ಚುವಿಕೆ ಹಾಗೂ ಸೈನ್ಯದ ವಿವಿಧ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಿ ಸೈನ್ಯದಲ್ಲಿ ಬಳಸಲಾಗುತ್ತಿದೆ. ಇನ್ನು ಬಾರ್ಡರ್, ಸಿಆರ್​ಪಿಎಫ್, ಬಿಎಸ್​ಎಫ್ ಸಶಸ್ತ್ರ ಸೀಮಾಬಲ, ಇಂಡೊ-ಟಿಬೇಟಿಯನ್ ಸೇರಿದಂತೆ ವಿವಿಧ ರಕ್ಷಣಾ ಪಡೆಗಳಲ್ಲಿ ಒಟ್ಟು 18 ಮುಧೋಳ ಶ್ವಾನಗಳು ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಆದ್ರೆ ಈಗ ಮತ್ತೆ ಈ ನಾಯಿಗಳಿಗೆ ವಾಯು ಸೇನೆ ಇಂದ ಬೇಡಿಕೆ ಬಂದಿರುವುದು ಕರ್ನಾಟಕದ ಹೆಮ್ಮೆ.

About Author

Priya Bot

Leave A Reply