ಇಂದಿನಿಂದ ಬೀದರ್-ಕಲಬುರಗಿ ರೈಲು ಪುನರಾರಂಭ

0

ಕಲಬುರಗಿ

ಕೋವಿಡ್ ಸೋಂಕಿನ ಕಾರಣದಿಂದಾಗಿ ಬೀದರ – ಕಲಬುರಗಿ ಸ್ಥಗೀತಗೊಂಡಿದ್ದ ಡೊಮೋ ಪ್ಯಾಸೆಂಜರ್ ರೈಲು ನಾಳೆಯಿಂದ ಜು. 19ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಭಗವಂತ ಖುಬಾ ಅವರು ತಿಳಿಸಿದ್ದಾರೆ. ನಾಳೆಯಿಂದ ಬೀದರದಿಂದ ಕಲಬುರಗಿಗೆ 2 ಬಾರಿ ಹೊಗಿಬgಲಿದೆ. ಈ ರೈಲು ವಾರದ 6 ದಿನಗಳು ಚಲಿಸಲಿದ್ದು, ರವಿವಾರ ರೈಲು ಸೇವೆ ಇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.

ಜಿಲ್ಲೆಯ ಜನರ ದಶಕಗಳ ಕನಸಾಗಿದ್ದ ಜೀದರ-ಕಲಬುರಗಿ ರೈಲ್ವೆಯನ್ನು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಯವರು ಉದ್ಭಾಟಿಸಿ, ಜನತೆಯ ಬಹುಬೇಡಿಕೆಯ ಕನಸನ್ನು ನನಸು ಮಾಡಿದ್ದರು. ಆದರೆ ಕೋವಿಡ್ ಮಹಾಮಾರಿ ಕಾರಣದಿಂದ ಬೀದರ – ಕಲಬುರಗಿ ಡೆಮೊ ರೈಲು ಸ್ಥಗಿತಗೊಂಡಿತ್ತು ಜೊತೆಗೆ ಹೈದ್ರಾಬಾದ -ಪೂರ್ಣ ಜಂಕ್ಷನ್ ಪ್ಯಾಸೆಂಜರ್ ರೈಲು ಸಹ ಸ್ಥಗಿತಗೊಂಡಿತ್ತು. ಈ ರೈಲುಗಳಲ್ಲ, ಹೆಚ್ಚಾಗಿ ಬಡವರು. ವಿದ್ಯಾರ್ಥಿಗಳು, ಸಣ್ಣಪುಟ್ಟ ವ್ಯಾಪಾರಿಗಳು ಪ್ರಯಾಣಿಸುತ್ತಿದ್ದರು. ಈ ರೈಲುಗಳ ಸ್ಥಗಿತದಿಂದ ಜೀದರ ಲೋಕಸಭಾ ಕ್ಷೇತ್ರದ ಜನರಿಗೆ ತುಂಬಾ ಅನಾನುಕೂಲವಾಗುತ್ತಿತ್ತು. ಮೇಲಿಂದ ಮೇಲೆ ರೈಲ್ವೆ ಅಧಿಕಾರಿಗಳ ಮೇಲೆ ಒತ್ತಡ ತಂದು, ಈ ಎರಡು ರೈಲುಗಳು ನಾಳೆ ದಿನಾಂಕ: 19-07-2021 ರಿ0ದ ಪುನರ್ ಪ್ರಾರಂಭಗೊಳ್ಳಲವೆ.

ಬೀದರ – ಕಲಬುರಗಿ ಈ ಮೊದಲು ದಿನಕ್ಕೆ ಒಂದು ಬಾರಿ ಮಾತ್ರ ಬೀದರನಿಂದ ಕಲಬುರಗಿಗೆ ಹೊಗಿ ಬರುತ್ತಿತ್ತು. ಇದರಿಂದ ಅಷ್ಟೋಂದು ಉಪಯೋಗವಾಗುತ್ತಿಲ್ಲವೆಂದು ಅಧಿಕಾರಿಗಳ ಗಮನಕ್ಕೆ ತಂದ ಕಾರಣ. ನಾಳೆಯಿಂದ ಬೀದರದಿಂದ ಕಲಬುರಗಿಗೆ 2 ಬಾರಿ ಹೊಗಿಬgಲಿದೆ. ಈ ರೈಲು ವಾರದ 6 ದಿನಗಳು ಚಲಿಸಲಿದ್ದು, ರವಿವಾರ ರೈಲು ಸೇವೆ ಇರುವುದಿಲ್ಲ.

ಬೀದರ-ಕಲಬುರಗಿ ರೈಲು (07761) ಪ್ರತಿದಿನ ಬೆಳಗ್ಗೆ 6.5ರಕ್ಕೆ ಬೀದರನಿಂದ ಹೊರಟು ಖಾನಾಪೂರ, ಹಳ್ಳಬೇಡ, ಹುಮನಾಬಾದ, ಕಮಲಾಪೂರ. ತಾಜ್: ಸುಲ್ತಾನಪೂರ ಮಾರ್ಗವಾಗಿ ಬೆಳಗ್ಗೆ 10.30ಕ್ಕೆ ಕಲಬುರಗಿ ತಲುಪಲದೆ. ಮತ್ತು (07762) ರೈಲು ಸಂಖ್ಯೆಯಿAದ ಬೆ. 10.45ಕ್ಕೆ ಕಲಬುರಗಿಯಿಂದ ಹೊರಟು ಬಂದ ಮಾರ್ಗವಾಗಿ ಮಧ್ಯಾನ 02.20ಕ್ಕೆ ಬೀದರ ತಲುಪಣದೆ.

ನಂತರ (07763) ರೈಲು ಸಂಖ್ಯೆಯಿAದ ಮಧ್ಯಾನ 3.55ಕ್ಕೆ ಬೀದರನಿಂದ ಹೊರಟು ರಾತ್ರಿ. 7.30ಕ್ಕೆ ಕಲಬುರಗಿ, ತಲುಪಲಿದೆ, (07764) ರೈಲು ಸಂಖ್ಯೆಯಿಂದ ರಾತ್ರಿ 07.45ಕ್ಕೆ ಕಲಬುರಗಿಯಿಂದ ಹೊರಟು ರಾತ್ರಿ 11.20ಕ್ಕೆ ಬೀದರಗೆ ತಲುಪಲದೆ.

ಹೈದ್ರಾಬಾದ – ಪುರ್ಣ ಜಂಕ್ಷನ್ ಪ್ಯಾಸೆಂಜರ್ ರೈಲು ನಾಳೆ ದಿನಾಂಕ 19-07-2021 ರಿಂದ ರೈಲು ಸಂಖ್ಯೆ. (07653). ಹೈದ್ರಾಬಾದನಿಂದ ಬೆಳಿಗ್ಗೆ. 8.20ಕ್ಕೆ. ಹೊರಟು, ಖೈರತಾಬಾದ. ಬೆಗಂಪೇಟ್, ವಿಕಾರಾಬಾದ, ಜಹಿರಾಬಾದ ಮೂಲಕ ಜೀದರಗೆ ಬೆ. 11.20ಕ್ಕೆ ತಲುಪಿ ಭಾಲ್ಕಿ, ಕಮಲನಗರ ಉದಗಿರ ಮತ್ತು ಮಿರಬಲ್ ಮುಖಾಂತರ ಅದೇ ದಿನ ರಾತ್ರಿ 09.00 ಗಂಟಿಗೆ ಪೂರ್ಣ ಜಂಕ್ಷನ್‌ಗೆ ತಲುಪದೆ.

ಪೂರ್ಣ ಜಂಕ್ಷನ್ ನಿಂದ ರೈಲು ಸಂಖ್ಯೆ (07654) ನಾಳೆ ದಿನಾ0ಕ: 19-07-2021 ಬೆಳಗ್ಗೆ 07.40 ಕ್ಲೈ ಪೂರ್ಣ ಜಂಕ್ಟನ್ ನಿಂದ ಹೊರಟು ಪರಬಣಿ, ಲಾತೂರ ರೋಡ, ಉದಗಿರ. ಕಮಲನಗರ, ಭಾಲ್ಡಿ. ಜದರಗೆ ಮಧ್ಯಾನ: 02.12 ಕ್ಕೆ ತಲುಪಿ ಜಹಿರಾಬಾದ ಮೂಲಕ ರಾತ್ರಿ 07.10ಕ್ಕೆ ಹೈದ್ರಾಬಾದ ತಲುಪಲದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply