ದುಬೈ- ಚಿತ್ರದ ಪ್ರಚಾರಕ್ಕೆ ಈಗ ಕೋಟಿ ಕೋಟಿ ಖರ್ಚು ಮಾಡಲಾಗುತ್ತಿದೆ. ಅದರಲ್ಲಿ ವಿದೇಶಿ ನೆಲದಲ್ಲಿ ಹೋಗಿ ಪ್ರಚಾರ ಮಾಡುವುದು ಎಂದ್ರೆ ಅದು ಸಾಮಾನ್ಯವಲ್ಲಾ ಆದ್ರೆ ಈಗ ಕನ್ನಡ ಚಿತ್ರತಂಡ ಒಂದು ವಿದೇಶ ನೆಕಲದಲ್ಲಿ ಹೋಗಿ ಕನ್ನಡದ ಚಿತ್ರದ ಪ್ರಚಾರ ಮಾಡಿದೆ. ಹೌದು ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರ ಬಹು ದಿನಗಳಿಂದ ನೀರಿಕ್ಷೆಯನ್ನು ಹೆಚ್ಚಿಸಿದ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಲಾಂಚ್ ಆಗಿದೆ. ಹೌದು ಅದು ವಿಶ್ವದ ಅತೀ ಎತ್ತರ ಕಟ್ಟಡ ಎಂದು ಹೆಸರಾಗಿರುವ ಬುರ್ಜ್ ಖಲೀಫಾದ ಕಟ್ಟಡದ 148 ಮಹಡಿಯಲ್ಲಿ ನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣ ದ ಲೋಗೋ ಲಾಂಚ್ ಆಗಿದೆ.
ವಿಕ್ರಾಂತ್ ರೋಣ ಸಿನಿಮಾ ಲೋಗೋ ಲಾಂಚ್ ಜೊತೆಯಲ್ಲಿ ಕಿಚ್ಚಾ ಸುದೀಪ್ ಚಿತ್ರ ರಂಗಕ್ಕೆ ಪಾದಾರ್ಫನೆ ಮಾಡಿ 25 ವರ್ಷಗಳು ಕಳೆದಿವೆ ಹೀಗಾಗಿ ಚಿತ್ರ ತಂಡ ಚಿತ್ರದ ಪ್ರಚಾರದ ಜೊತೆಯಲ್ಲಿ ಕಿಚ್ಚಾ ಸುದೀಪ್ ಅವರ ಸಿನಿ ಪಯನದ 25 ವರ್ಷ ಸಂಭ್ರಮವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಕಿಚ್ಚಾ ಸುದೀಪ್ ಸಿನಿ ಪಯನವನ್ನು ತೋರಿಸುವ ಮೂರು ನಿಮಿಷದ ವರ್ಚೂವಲ್ ವಿಡಿಯೋ ಬುರ್ಜ್ ಖಲೀಫ್ ಬಿಲ್ಡಿಂಗ ಮೇಲೆ ಬಿತ್ತರಗೊಂಡಿದ್ದು ಕೋಟ್ಯಾಂತರ ಅಭಿಮಾನಿಗಳು ಕಿಚ್ಚನ ಸಿನಿ ಪಯಣದ ವಿಡಿಯೋ ನೋಡಿ ಫುಲ್ ಕುಷ್ ಆಗಿದ್ದಾರೆ. ಇನ್ನು ಕಿಚ್ಚಾ ಸುದೀಪ್ ಸಿನಿ ಪಯಣದ ಮೂರು ನಿಮಿಸಿದ ಈ ವಿಡಿಯೋವನ್ನು ಕಿಚ್ಚನ ತಂಡ ಒಟ್ಟು 6 ಕ್ಯಾಮರಾದಲ್ಲಿ ಸರೆಹಿಡಿದಿದ್ದಾರೆ.