ಹೋಲಿಕೆ ಸಂತೋಷಕ್ಕೆ ಮಾರಕ

0

ಡಾ. ಈಶ್ವರಾನಂದ ಸ್ವಾಮೀಜಿ

ಕೆಂಚ ಕರಿಕನ ನೆನೆದಡೆ ಕರಿಕನಾಗಬಲ್ಲನೆ
ಕರಿಕ ಕೆಂಚನ ನೆನೆದಡೆ ಕೆಂಚನಾಗಬಲ್ಲನೆ
ದರಿದ್ರನು ಸಿರಿವಂತನ ನೆನೆದಡೆ ಸಿರವಂತನಾಗಬಲ್ಲನೆ
ಸಿರಿವಂತ ದರಿದ್ರನ ನೆನೆದಡೆ ದರಿದ್ರನಾಗಲ್ಲನೆ
ಮುನ್ನಿ ಪುರಾತನರ ನೆನೆದು ಧನ್ಯನಾದೆಹೆನೆಂಬ
ಮಾತಿನ ರಂಜಕರನೇನೆಂಬೆ ಕೂಡಲಸಂಗಮದೇವಾ.

ಬಸವಣ್ಣನವರ ಈ ಮೇಲಿನ ವಚನವನ್ನು ಗಮನಿಸಿದರೆ ಕಪ್ಪಿದ್ದ ವ್ಯಕ್ತಿ ಬಿಳುಪಿದ್ದ ವ್ಯಕ್ತಿಯ ನೆನೆದರೆ ಬಿಳುಪನಾಗುವನೇ? ಬಡವ ಶ್ರೀಮಂತನ ನೆನೆದರೆ ಶ್ರೀಮಂತನಾಗಬಲ್ಲನೇ ಎಂಬುವುದನ್ನು ಗಮನಿಸಿದರೆ ನಾವು ನಮ್ಮನ್ನು ಮತ್ತೊಬ್ಬರೊಂದಿಗೆ ಹೋಲಿಸಿಕೊಳ್ಳುವುದರಿಂದ ಆಗುವ ಅನಾಹುತಗಳನ್ನು ಸಾಕಷ್ಟುವಿದ್ದರೆ ಅದರಿಂದ ಆಗುವ ಚಿಕ್ಕ ಘಟನೆಯೊಂದು ಇಲ್ಲಿ ನೋಡಬಹುದು.
ಒಮ್ಮೆ ಒಬ್ಬ ಸ್ವಾಮೀಜಿಯವರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಟಿಕೇಟು ತನಿಖಾಧಿಕಾರಿ ತಮ್ಮ ಕೆಲಸವನ್ನು ಮುಗಿಸಿ ಸ್ವಾಮೀಜಿಯವರ ಹತ್ತಿರ ಬಂದು ನಮಸ್ಕರಿಸಿ ಕುಳಿತುಕೊಂಡರು. ಸ್ವಾಮೀಜಿ! ಇಂದು ನೀವು ಪ್ರಯಾಣ ಮಾಡುತ್ತಿರುವುದು ನನ್ನ ಪುಣ್ಯವೆಂದು ಭಾವಿಸುತ್ತೇನೆ. ಏನೆಂದರೆ ನಾನಿಂದು ನಿವೃತ್ತನಾಗುತ್ತಿದ್ದೇನೆ. ನಿಮ್ಮ ದರ್ಶನದ ಸೇವೆಯ ಅವಕಾಶ ನನಗೆ ಅನಾಯಾಸವಾಗಿ ಸಿಕ್ಕಿತು. ನನಗೆ ಆಶೀರ್ವಾದ ಮಾಡಿ ಎಂದರು. ಸ್ವಾಮೀಜಿಯವರು ಅವರಿಗೆ ಒಂದೆರಡು ಹಣ್ಣುಗಳನ್ನು ಕೊಟ್ಟು ಶಾಂತಿಯುತವಾದ ನಿವೃತ್ತಿ ಜೀವನ ನಡೆಸುವಂತಾಗಲೆಂದು ಹಾರೈಸಿದರು. ಆನಂತರ ಲೋಕಾಭಿರಾಮದ ಮಾತುಗಳನ್ನಾಡುವಾಗ ತನಿಖಾಧಿಕಾರಿಯವರ ಸೇವಾವಧಿಯ ವಿಶೇಷ ಅನುಭವವೇನಾದರೂ ಇದ್ದರೆ ಅದನ್ನು ಹೇಳಬೇಕೆಂದೂ ಕೇಳಿದಾಗ, ಅವರು ಹೀಗೆ ಹೇಳಿದರು.

ಅವರು ಟಿಕೇಟುಗಳನ್ನು ತನಿಖೆ ಮಾಡುತ್ತ ಕಳೆದಿರುವ ಮೂವತ್ತೆರಡು ವರ್ಷಗಳಲ್ಲಿ ವಿಶೇಷವಾಗಿ ಕಂಡ ವಿಷಯವೊಂದಿದೆ. ಅದೆನೆಂದರೆ ಪ್ರಥಮ ದರ್ಜೆಯಲ್ಲೋ, ಹವಾನಿಯಂತ್ರಿತ ಭೋಗಿಯಲ್ಲೋ ಪ್ರಯಾಣ ಮಾಡುವವರು ನಿದ್ದೆ ಮಾಡದೆ ಪ್ರಯಾಣಿಸುವುದನ್ನೂ ಕಂಡಿದ್ದೇನೆ. ಸಾಮಾನ್ಯ ದರ್ಜೆಯ ಭೋಗಿಯಲ್ಲಿ ಕಾಲಿಡಲೂ ಸ್ಥಳವಿಲ್ಲದಷ್ಟು ಜನ ತುಂಬಿದರೂ ನಗುನಗುತ್ತ ಮಾತನಾಡಿಕೊಳ್ಳುತ್ತ ಪ್ರಯಾಣ ಮಾಡುವವರನ್ನೂ ಅಲ್ಲಿಯೇ ನಿಶ್ಚಿಂತೆಯಿಂದ ಗೊರಕೆ ಹೊಡೆಯುತ್ತ ಪ್ರಯಾಣ ಮಾಡುವವರನ್ನೂ ನೋಡಿದ್ದೇನೆ. ಅಷ್ಟೊಂದು ದುಬಾರಿ ಹಣ ಕೊಟ್ಟವರು ಪ್ರಯಾಣದಲ್ಲಿ ಆನಂದವಾಗಿಲ್ಲದಿರುವುದೂ, ಆದರೆ ಕನಿಷ್ಠ ಹಣ ಕೊಟ್ಟವರು ಅಥವಾ ಪ್ರಯಾಣ ಮಾಡುವವರು ಆನಂದವಾಗಿ ಪ್ರಯಾಣ ಮಾಡುವುದನ್ನು ಕಂಡು ಆಶ್ಚರ್ಯವಾಗುತ್ತಿತ್ತು. ಅದರ ರಹಸ್ಯವೇನೆಂದು ನನಗೆ ಇಂದಿಗೂ ಅರ್ಥವಾಗಿಲ್ಲೆಂದು ಹೇಳಿದರು.

ಆಗ ನಮ್ಮ ಸ್ವಾಮೀಜಿಯವರು ನೀವು ಎಂದಾದರೂ ಯಾವುದಾದರೂ ತೋಟಕ್ಕೆ ಹೋಗಿದ್ದೀರಾ? ಅಲ್ಲಿ ಎತ್ತರವಾಗಿ ಬೆಳೆದ ಹಣ್ಣಿನ ಮರಗಳು, ಅಷ್ಟೇನೂ ಎತ್ತರವಲ್ಲದ ಹೂಗಿಡಗಳನ್ನು ಮತ್ತು ನೆಲದ ಮೇಲೆ ಒಂದೆರಡು ಇಂಚಿನಷ್ಟೇ ಬೆಳೆಯುವ ಹುಲ್ಲುಗಾವಲನ್ನು ನೋಡಿದ್ದೀರಾ? ಮರಗಳು, ಗಿಡಗಳು ಮತ್ತು ಹುಲ್ಲು ಆನಂದದಿಂದ ನಳಿನಳಿಸುತ್ತಿರುತ್ತವಲ್ಲವೇ? ಇದಕ್ಕೇನು ಕಾರಣವಿರುಬಹುದೆಂದು ಯೋಚಿಸಿದ್ದೀರಾ? ಎಂದು ಕೇಳಿದರು. ಮರ-ಗಿಡಗಳು ಹುಲ್ಲು ಸಂಪಾಗಿಬೆಳೆಯುವುದನ್ನು ತಂಪಾಗಿ ಉಳಿಯುವುದನ್ನು ಗಮನಿಸಿದ್ದೇನೆ. ಆದರೆ ಕಾರಣ ಯೋಚಿಸಿಲ್ಲ ಎಂದರು. ಆಗ ಸ್ವಾಮೀಜಿಯವರು ಒಂದೆರಡಿಂಚು ಬೆಳೆಯುವ ಹುಲ್ಲು, ಐದಾರಡಿ ಎತ್ತರ ಬೆಳೆಯುವ ಹೂ ಬಿಡುವ ಗಿಡದೊಂದಿಗೆ ತನ್ನನ್ನು ಹೋಲಿಸಿಕೊಳ್ಳುವುದಿಲ್ಲ. ಹಾಗೆಯೇ ಐದಾರಡಿ ಎತ್ತರದ ಗಿಡಗಳು ತಮನ್ನು ಎತ್ತರದ ಮರಗಳೊಂದಿಗೆ ಹೋಲಿಸಿಕೊಳ್ಳುವುದಿಲ್ಲ. ತಾವೇಕೆ ಇಷ್ಟು ಕಡಿಮೆ ಎತ್ತರ, ಅವೇಕೆ ಅಷ್ಟೊಂದು ಎತ್ತರವೆಂದು ಚಿಂತಿಸುವುದಿಲ್ಲ. ಅವು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳಲು ಪ್ರಾರಂಭಿಸಿದರೆ ಅವೂ ಚಿಂತೆಗೊಳಗಾಗುತ್ತವೆ, ಬೆಳೆಯುವುದನ್ನು ನಿಲ್ಲಿಸಿಬಿಡುತ್ತವೆ. ಬೆಳೆಯುವಿಕೆಯನ್ನು ಕಳೆದುಕೊಳ್ಳತ್ತವೆ. ನೀವು ಹೇಳಿದ ಪ್ರಯಾಣಿಕರು ತಮ್ಮನ್ನು ಹವಾನಿಯಂತ್ರಿತ ಭೋಗಿಯಲ್ಲಿರುವ ಪ್ರಯಾಣಿಕರು ತಮ್ಮನ್ನು ಹವಾನಿಯಂತ್ರಿತ ಭೋಗಿಯಲ್ಲಿರುವ ಪ್ರಯಾಣಿಕರೊಂದಿಗೆ ಅಥವಾ ಅಲ್ಲಿರುವವರು ವಿಮಾನದಲ್ಲಿ ಪ್ರಯಾಣಿಸುವವರೊಂದಿಗೆ ಹೋಲಿಸಿಕೊಂಡು ಚಿಂತಿಸುತ್ತಾರೆ. ಪ್ರಯಾಣದ ಆನಂದವನ್ನು ಕಳೆದುಕೊಳ್ಳುತ್ತಾರೆ. ಸಾಮಾನ್ಯ ದರ್ಜೆಯ ಪ್ರಯಾಣಿಕರು ಆರೀತಿ ಹೋಲಿಕೆ ಮಾಡಿಕೊಳ್ಳುವುದಿಲ್ಲ. ಆದುದರಿಂದ ಆನಂದವಾಗಿ ಪ್ರಯಾಣ ಮಾಡುತ್ತಾರೆ ಎಂದರು.

ಸ್ವಾಮೀಜಿಯವರ ಮಾತು ರೈಲು ಪ್ರಯಾಣಿಕರಿಗೆ ಮಾತ್ರವಲ್ಲ, ನಮಗೂ ಅನ್ವಯಿಸುತ್ತದಲ್ಲವೇ? ನಾವು ಬದುಕಿನಲ್ಲಿ ಆನಂದವನ್ನು ಅನುಭವಿಸುತ್ತಿಲ್ಲವಾದರೆ ಇತರರ ಕಸುಬು, ದೊಡ್ಡ ಮನೆ, ಕಾರುಗಳು, ವೇತನಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡು ಕೊರಗುವುದು ತಪ್ಪಲ್ಲವೇ? ಆದುರಿಂದ ಒಬ್ಬರಿಂದ ಒಬ್ಬರು ಹೋಲಿಕೆ ಮಾಡಿಕೊಂಡರೆ ಆನಂದವನ್ನು ಕಳೆದುಕೊಳ್ಳುತ್ತೇವೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply