ಚಾಮರಾಜನಗರ : ಸ್ನೇಹಿತರೊಡನೆ ನದಿ ಬಳಿ ಹೋಗಿದ್ದ ಕಾರ್ಮಿಕನೋರ್ವ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಕೊಳ್ಳೇಗಾಲ ತಾಲೂಕಿನ ಸತೇಗಾಲದ ವೆಸ್ಲಿ ಸೇತುವೆ ಸಮೀಪದ ಕಾವೇರಿ ನದಿ ತೀರದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಶರಣಪ್ಪ (28) ಎಂಬಾತ ಮೃತ ದುರ್ದೈವಿ. ಈತ ಮಹದೇಶ್ವರ ಬೆಟ್ಟದ ರಸ್ತೆ ಕಾಮಗಾರಿಯಲ್ಲಿ ಮಿಷನ್ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ. ದೊಡ್ಡಿಂದುವಾಡಿ ಗ್ರಾಮದ ಬಳಿ ಕ್ಯಾಂಪ್ನ ಕೆಲಸಗಾರರ ಜೊತೆ ವಾಸವಿದ್ದರು. ಭಾನುವಾರ ರಜೆ ಕಾರಣ ಶರಣಪ್ಪ ಆರು ಮಂದಿ ಗೆಳೆಯರ ಜೊತೆ ಸತ್ತೇಗಾಲ ಸಮೀಪದ ವೆಸ್ಲಿ ಸೇತುವೆ ಬಳಿಯ ಕಾವೇರಿ ನದಿಗೆ ತೆರಳಿದ್ದ ಸಂದರ್ಭದಲ್ಲಿ ನೀರಿಗೆ ಕಾಲು ಬಿಟ್ಟು ಆಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ.
ಶರಣಪ್ಪನಿಗೂ ಹಾಗೂ ಜೊತೆಯಲ್ಲಿದ್ದ ಸ್ನೇಹಿತರಿಗೂ ಈಜು ಬರದ ಕಾರಣ ಈ ಅವಘಡ ಸಂಭವಿಸಿದೆ. ಕಾಲು ಜಾರಿ ನದಿಗೆ ಬಿದ್ದು ಕಾರ್ಮಿಕ ಶರಣ್ಣಪ್ಪ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಚಾಮರಾಜನಗರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿನೌ ಅಪ್ಅನ್ನು ಡೌನ್ಲೋಡ್ ಮಾಡಿಕೊಳ್ಳಲ್ಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ – CLICK HERE
ನೀವು ಬರಹಗಾರರೇ! ನಿಮಗಾಗಿ ಸಿಟಿಜನ್ ಜರ್ನಲಿಸಂ – CLICK HERE
G P Divakara