ಕ್ಯಾರೋಲಿನ್ ಅಗಲಿಕೆಗೆ ಕಂಬನಿ ಮಿಡಿದ ಗಣ್ಯರು

0

ವಿಜಯನಗರ – ಜನಪರ ಹೋರಾಟಗಾರ್ತಿ, ಶಿಕ್ಷಣೆ ತಜ್ಞೆ , ಸಂಘ ಸಂಸ್ಥೆಗಳ ಮೂಲಕ ಸೇವಾ ಮನೋಭಾವದಿಂದ ತಮ್ಮ ಜೀವನವನ್ನೆ ಮುಡುಪಾಗಿಟ್ಟ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಶ್ರೀಮತಿ ಕ್ಯಾರೋಲಿನ್ ಲೂಸೀಯಾ ಅವರ ಕರೋನಾ ಸೋಂಕಿನಿಂದ  ಮರಣ ಹೊಂದಿರುವು ಸಮಾಜಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ತಿಳಿಸಿದ್ದಾರೆ.

ಕ್ಯಾರೋಲಿನ್ ಲೂಸೀಯಾ ಅವರು ಸಾಕಷ್ಟು ಸಮಾಜಮುಖಿ ಕೆಲಸ ಮಾಡುತ್ತೀದ್ದರು, ಶಿಕ್ಷಣ ಸಂಸ್ಥೆಯನ್ನು ನಡೆಸುತ್ತೀದ್ದರು, ಹಲವಾರು ಸಂಘಟನೆಯಲ್ಲಿ ಭಾಗವಹಿಸಿ ನಿಷ್ಪಕ್ಷಪಾತ ಸೇವೆಯಲ್ಲಿ ಜನಪರ ಹೋರಾಟಗಾರರಾಗ  ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಅವರು ಸೇವೆಯನ್ನು ಮಾಡಿದ್ದಾರೆ.  ಅವರ ಧೈರ್ಯ ,ಚೈತನ್ಯದಂತೆ  ನಮ್ಮ ನಿಮ್ಮೆಲ್ಲರಲ್ಲಿ ಬರಲಿ ಮೃತ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ದುಖ್ಖ ತಡೆದುಕೊಳ್ಳವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡುವೆ. ಅವರ ಅಗಲಿಕೆ ನಮಗೆ ಸಹಿಸಲಾರದ ದುಖಃವಾಗಿದೆ ಎಂದು ಕಂಬನಿ‌ ಮಿಡಿದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply