ರಾಯಚೂರು –  ರಾಯಚೂರು ಜಿಲ್ಲೆಯಲ್ಲಿ 3ದಿನಗಳಿಗೊಮ್ಮೆ ಅಗತ್ಯ ವಸ್ತುಗಳ ಖರೀದಿಗೆ, ಲಾಕ್ ಡೌನ್ ಕೆಲಗಂಟೆಗಳು ಸಡಿಲಿಕೆ ಮಾಡಲಾಗುತ್ತದೆ. ಇಂದು ಕೂಡ ಸಾಮಾಜಿಕ ಅಂತರ ಮರೆತು ಮಾರುಕಟ್ಟೆಯಲ್ಲಿ ಜನಜಂಗುಳಿ ಸೇರಿದರು. ಇನ್ನು ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ ಖುದ್ದು ಲಾಕ್ ಡೌನ್ ಸಡಿಲಿಕೆ, ಅಗತ್ಯ ವಸ್ತುಗಳ ಖರೀದಿಗೆ ಜನ ಸೇರಿರುವುದನ್ನು ಪರಿಶೀಲಿಸಿದರು.

ಇನ್ನು ನಗರದ ಬಸವನಭಾವಿ ವೃತ್ತ ಹತ್ತಿರ ತರಕಾರಿ ಮಾರಾಟ ಸ್ಥಳಕ್ಕೆ ಗ್ರಾಹಕರನ್ನ ಹಾಗೂ ವ್ಯಾಪಾರಿಗಳನ್ನ ಮಾತನಾಡಿಸುವ ಯಾವ ಬೆಲೆಗೆ ಕಾಯಿಪಲ್ಲೆ ಮಾರಾಟ ಮಾಡುತ್ತಿದ್ದರೆ ಎನ್ನುವ ಕುರಿತು ವಿಚಾರಿಸಿದ್ರು. ಒಂದು ವೇಳೆ ಈಗಾಗಲೇ ತಿಳಿಸಿದಂತೆ ತರಕಾರಿ ಬೆಲೆಯನ್ನ ಮಾರಾಟ ಮಾಡಬೇಕು. ಒಂದು ವೇಳೆ ಹೆಚ್ಚಿನ ದರಕ್ಕೆ ತರಕಾರಿ ಮಾರಾಟ ಮಾಡಿದ್ದರೆ ಪೊಲೀಸ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ರು. ಇದಾದ ಬಳಿಕ ಸದರ್ ಬಜಾರ್ ಬಳಿ ದಿನಸಿ ಅಂಗಡಿ ಮುಂದೆ ಪರಸ್ಪರ ಅಂತರ ಕಾಯ್ದುಕೊಳ್ಳುವ ಮಾರ್ಕ್ ಮಾಡಬೇಕಾಗಿತ್ತು. ಆದ್ರೆ ಮಾರ್ಕ್ ಮಾಡದ ಅಂಗಡಿಯ ಮಾಲೀಕರ ಮೇಲೆ ಕ್ರಮ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದ್ರು. ಇದಾದ ಬಳಿಕ ನಗರದ ವಿವಿಧಡೆ ಪ್ರದಕ್ಷೀಣೆ ಹಾಕುವ ಖುದ್ದಾಗಿ ಪರಿಶೀಲನೆ ನಡೆಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply