ಬಳ್ಳಾರಿ- ಇಂದು ಬೆಳ್ಳಿಗ್ಗೆ ಲಾರಿ ಚಾಲಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಎಪಿಎಂಸಿ ಬಳಿ  ಲಾರಿ ಚಾಲಕನ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.  ಮೃತ ಚಾಲಕನ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ನಿವಾಸಿಯಾಗಿದ್ದು, ಇತನ ಹೆಸರು ಚಿದಾನಂದ,, ವಯಸ್ಸು 40 ಎಂದು ತಿಳಿದು ಬಂದಿದೆ. ಇನ್ನು ಸ್ಥಳಕ್ಕೆ ಹೊಸಪೇಟೆ ಬಡಾವಣೆ ಠಾಣೆ  ಪೋಲೀಸ್ ರು ಆಗಮಿಸಿ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಬೆಳ್ಳಗ್ಗೆ ಸುಮಾರು 5 ಗಂಟೆಯ ವೇಳೆಗೆ ಕೊಲೆ ನಡೆದಿರಬಹುದು ಎಂದು ಅಂದಾಜಿಸಿದ್ದಾರೆ. ಕೊಲೆಗೆ ಸೂಕ್ತ  ಕಾರಣ ತಿಳಿದಿಲ್ಲ,  ಪೋಲೀಸ್ ರು ಕೊಲೆ ಪ್ರಕಣವನ್ನು ದಾಖಲಿಕೊಂಡು, ಕೊಲೆಗಾರರ ಬೆನ್ನು ಬಿದ್ದಿದ್ದಾರೆ.

About Author

Priya Bot

Leave A Reply