ದೆಹಲಿ -ನಾಲ್ಕು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆ ಘೋಷಣೆ ಆದ ಬಳಿಕ ಚುನಾವಣಾ ಪೂರ್ವ ಸಮೀಕ್ಷೆಗಳು ಆರಂಭವಾಗಿದ್ದು. ಎಬಿಪಿ ನಡೆಸಿದ ಸಿ ವೋಟರ್ ಸಮೀಕ್ಷೆ ಫಲಿತಾಂಶ ಹೊರಬಿದ್ದಿದೆ.
ಕೇರಳ, ಪಶ್ಚಿಮ ಬಂಗಾಳ,  ಆಸ್ಸಾಂ ತಮಿಳುನಾಡು ಹಾಗೂ ಪುದುಚೇರಿಯ ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಲೇ ಸಮೀಕ್ಷೆ ನಡೆದಿದ್ದು, ಸಮೀಕ್ಷೆಯ ಫಲಿತಾಂಶ ಬಿಜೆಪಿಗೆ ಅಚ್ಚರಿಕಾದಿದೆ.

ಎಬಿಪಿ ಸಿ – ವೋಟರ್ ಸಮೀಕ್ಷೆ ಪ್ರಕಾರ ಪುದುಚೇರಿ ಒಂದು ಬಿಜೆಪಿ ಮಡಿಲಿಗೆ ಬೀಳಲಿದ್ದು ಉಳಿದಂತೆ ಬಿಜೆಪಿ ಗೆಲುವು ಸಾಧಿಸುವುದು ತುಂಬಾ ಕಷ್ಟ ಎನ್ನಲಾಗಿದೆ. ಸಮೀಕ್ಷೆಯಲ್ಲಿ ಮೊದಲ ಬಾರಿಗೆ ಪುದುಚೇರಿಯಲ್ಲಿ ಬಿಜೆಪಿ ಗೆಲ್ಲಲಿದ್ದು, ಬಿಜೆಪಿ ಮತ್ತೆ ಅಧಿಕಾರ ಅಸ್ಸಾಂ ನಲ್ಲಿ ಉಳಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಇತ್ತ ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಆದ್ರೆ ಚುನಾವಣೆಗೆ ಇನ್ನು ಸಮಯ ಇರುವ ಕಾರಣ  ಟಿಎಂಸಿ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

ದಕ್ಷಿಣ ರಾಜ್ಯಗಳಾದ ತಮಿಳುನಾಡು ಕೇರಳದಲ್ಲಿ ಕಮಲ ಅರಳುವುದಿಲ್ಲಾ ಆದ್ರೆ ಮತಗಳಿಕೆಯ ಪ್ರಮಾಣ ಮಾತ್ರ ಹೆಚ್ಚಾಗಲಿದೆ, ಬಿಜೆಪಿ ಇದಕ್ಕೆ ಮಾತ್ರ ಸಂತೋಷ ಪಡಬೇಕಿದೆ. ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಆಸೆಗೆ ಮತ್ತೆ ಹಿನ್ನಡೆ ಉಂಟಾಗಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಮೈತ್ರಿಯೊಂದಿಗೆ ಪಕ್ಷದ ವರ್ಚಸ್ಸು ವೃದ್ಧಿಯಾಗಲಿದೆ. ಕೇರಳದಲ್ಲಿ ಬಿಜೆಪಿ ಎರಡಂಕಿ ಸ್ಥಾನಗಳನ್ನು ಪಡೆಯದೇ ಹೋದರು ಮತಗಳಿಕೆ ಪ್ರಮಾಣ ಹೆಚ್ಚಲಿದೆ ಎಂದು ಸಮೀಕ್ಷೆ ಹೇಳಿದೆ.

ತಮಿಳುನಾಡು –234 ರಲ್ಲಿ  – ಎಐಎಡಿಎಂಕೆ– ಬಿಜೆಪಿ –56–66

ಕೇರಳ –140 ರಲ್ಲಿ ಬಿಜೆಪಿ – 0–2

ಪಶ್ಚಿಮ ಬಂಗಾಳ – 294 ರಲ್ಲಿ  ಬಿಜೆಪಿ –92–108

ಅಸ್ಸಾಂ –126 ಬಿಜೆಪಿ – 68–76

ಪುದುಚೇರಿ –30 ಬಿಜೆಪಿ –17–21

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply