ಬೆಂಗಳೂರು- ರಿಷಭ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸುತ್ತಿರುವ 2ನೇ ಸಿನಿಮಾ ಹೀರೋ ಚಿತ್ರದ ಮೊದಲ ಹಾಡು ಬಿಡುಗಡೆಗೆ ಸಿದ್ದವಾಗಿದೆ. ‘ನೆನಪಿನ ಹುಡುಗಿಯೇ’ ಎಂಬ ಸಾಲಿನಿಂದ ಆರಂಭವಾಗುವ ಚಿತ್ರದ ಹಾಡೊಂದು ನಾಳೆ ಬಿಡುಗಡೆ ಮಾಡಲಿದ್ದಾರೆ. ಈ ವಿಷಯವನ್ನು ಸ್ವತಃ ರಿಷಭ್ ಶೆಟ್ಟಿ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ ಮಾಡಿದ್ಧಾರೆ.
ಈಗಾಗಲೇ ಚಿತ್ರದ ಕುರಿತು ಸಾಕಷ್ಟು ಕುತೂಹಲ ಮೂಡಿಸಿದ್ದು ನಾಳೆ ಯೂಟೂಬ್ ನಲ್ಲಿ ಹಾಡನ್ನು ರಿಲೀಸ್ ಮಾಡಲಿದ್ದಾರೆ. ಇನ್ನು ಚಿತ್ರದಲ್ಲಿ ಕಿರುತರೆಯಲ್ಲಿ ನಟನೆ ಮಾಡಿ ಎಲ್ಲರ ಮನೆ ಮಾತಾಗಿರುವ ಗಾನವಿ ಲಕ್ಷ್ಮಣ್ ಅಭಿನಯಿಸಿದ್ದಾರೆ. ಎಮ್ ಭರತ್ ರಾಜ ನೀರ್ದೆಶನದ ಹೀರೋ ಸಿನಿಮಾ ಮಾರ್ಚ 5 ರಂದು ಬಿಡುಗಡೆ ಆಗಲಿದೆ.