ಹೊಸಪೇಟೆ- ಗಣಿ ನಾಡು ಬಿಸಿಲು ನಾಡು ಎಂದೆಲ್ಲಾ ಕರೆಸಿಕೊಳ್ಳುವ ಗಡಿ ಭಾಗದಲ್ಲಿರೋ ಬಳ್ಳಾರಿ ಜಿಲ್ಲೆ ವಿಭಜನೆಗೆ ಸರ್ಕಾರ ಮುಂದಾಗಿದೆ. ಹೌದು ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಬೇಕು ಎನ್ನುವ ಎರಡು ದಶಕಗಳ ಹೋರಾಟಕ್ಕೆ ಇಂದು ಅಂತ್ಯ ಹಾಡುವ ಕಾಲ ಬಂದಿದೆ. ವಿಜಯನಗರದ ಜನರ ಬಹುದಿನಗಳ ಕನಸು ಇಂದು ನನಸಾಗಲು ಇನ್ನೇನು ಕೆಲವೇ ದಿನಗಳು ಕಾಯಬೇಕಿದೆ. ಅಖಂಡ ಬಳ್ಳಾರಿ ಜಿಲ್ಲೆ ಭೌಗೋಳಿಕವಾಗಿ 24,45,351 ಎಕರೆ ವಿಸ್ತೀರ್ಣತೆಯನ್ನು ಹೊಂದಿದೆ. 11 ತಾಲೂಕು, 10 ವಿಧಾನಸಭಾ ಕ್ಷೇತ್ರಗಳನ್ನು ಒಳ ಗೊಂಡಿದೆ. ಈ ವಿಸ್ತೀರ್ಣವೇ ಇಂದು ಜಿಲ್ಲೆ ವಿಭಜನೆಗೆ ಪ್ರಮುಖ ಕಾರಣವಾಗಿದೆ.

ಒಂದೊಂದು ಗ್ರಾಮಗಳು ಜಿಲ್ಲಾ ಕೇಂದ್ರದಿಂದ ಸುಮಾರು 190 ಕಿಲೋ ಮೀಟರ್ ದೂರ ಇವೆ.  ಜಿಲ್ಲೆಯ ಗಡಿ ಭಾಗದಲ್ಲಿ ಇರುವ  ಜನರು ಜಿಲ್ಲಾ ಕೇಂದ್ರಕ್ಕೆ ಬಂದು ತಮ್ಮ ಕೆಲಸ ಮಾಡಿಕೊಂಡು ಮರಳಿ ಊರಿಗೆ ಹೋಗಬೇಕು ಎಂದ್ರೆ ಅದಕ್ಕೆ ಎರಡು ದಿನಗಳ ಪ್ರವಾಸವೇ ಬರಬೇಕು. ಯಾಕಂದ್ರೆ ಜಿಲ್ಲೆ ಕೇಂದ್ರ ಅಷ್ಟೊಂದು ದೂರ ಇದೆ. ಒಂದು ಹೊತ್ತಿನ ಕೆಲಸಕ್ಕೆ ಅವರು ದೂರದ ಊರಿನಿಂದ ಬಂದು ಮರಳಿ ಕೆಲಸ ಮಾಡಿಕೊಂಡು ಹೋಗಲು ಸಾಧ್ಯವೇ ಇಲ್ಲಾ.  ಜಿಲ್ಲಾ ಕೇಂದ್ರದಿಂದ 100 ರಿಂದ 190 ಕಿಮೀಗೂ ದೂರದಲ್ಲಿರುವ ಹಡಗಲಿ, ಹರಪ ನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ತಾಲೂಕುಗಳಿವೆ. ಜತೆಗೆ ದುಬಾರಿ ಖರ್ಚು ಸಹ ಆಗಲಿದೆ. ಹೀಗಾಗಿ ಬಳ್ಳಾರಿ ಜಿಲ್ಲೆ ವಿಭಜನೆಯು ಪಶ್ಚಿಮ ತಾಲೂಕುಗಳ ಜನರಿಗೆ ಅಗತ್ಯ ಮತ್ತು ಅನಿವಾರ್ಯವೂ ಆಗಿತ್ತು. ಹೀಗಾಗಿ ಹೊಸಪೇಟೆ ಜಿಲ್ಲಾ ಕೇಂದ್ರವಾಗಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಆ ಭಾಗದ ಜನರು ಒತ್ತಾಯಿಸಿದ್ದು, ದಶಕದ ಹೋರಾಟಕ್ಕೆ ಸರ್ಕಾರ ಈ ಬಾರಿ ತಾರ್ಕಿಕ  ಅಂತ್ಯ ಸಿಗುವ ಲಕ್ಷಣಗಳು ಗೋಚರವಾಗಿವೆ..

About Author

Priya Bot

Leave A Reply