ಚಿಕ್ಕಬಳ್ಳಾಪುರ – ತನನ್ನು ಸಾಕಿ ಸಲಹಿದ ಅಜ್ಜಿಯನ್ನು ಇಲ್ಲೊಬ್ಬ ಮೊಮ್ಮಗ ಕೊಲೆ ಮಾಡಿದ್ದಾನೆ. ಕೇವಲ ಕುಡಿಯಲು ಹಣ ನೀಡದ ಕಾರಣ ಮೊಮ್ಮಗನೇ ತನ್ನ ಅಜ್ಜಿಯನ್ನಿ  ಕೊಲೆ ಮಾಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ  ತಾಲೂಕಿನ ವೇದಲವೇಣಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ  ವಾಸವಾಗಿರುವ ನರಸಮ್ಮ(68) ಎಂಬುವರ ಮೊಮ್ಮಗ ನರಸಿಂಹಮೂರ್ತಿ(28) ಕೊಲೆ ಮಾಡಿದ್ದಾನೆ. ಕುಡಿತದ ದಾಸನಾಗಿದ್ದ ಮೊಮ್ಮಗ ನರಸಿಂಹ ಮೂರ್ತಿ ಅಜ್ಜಿಗೆ ಆಗಾಗ ಕುಡಿಯಲು ಹಣ ನೀಡುವಂತೆ ಕೇಳುತಿದ್ದ. ಅಜ್ಜಿ ಬಳಿ ಇದ್ದ ಹಣವನ್ನು ಅನೇಕ ಸಾರಿ ಮೊಮ್ಮಗ ಹಣ ಕಿತ್ತು ಕೊಂಡು ಹೊಗುತಿದ್ದ.‌ನಿನ್ನೆ ರಾತ್ರಿಯೂ ಸಹ ಕುಡಿಯಲ ಹಣ ಕೇಳಿದ್ದಾನೆ. ಕಾರಣ ಅಜ್ಜಿ ಹಣ ನೀಡಲು ನಿರಾಕರಣೆ ಮಾಡಿದ್ದಾಳೆ. ಆಗ ಕೋಪಗೊಂಡ ಮೊಮ್ಮಗ ಕಲ್ಲಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಇನ್ನೂ ವಿಷಯ ತಿಳಿದ ಗೌರೀಬಿದನೂರಿನ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ, ಸ್ಥಳದ ಪರಿಶೀಲನೆ ನಡೆಸಿದ್ದಾರೆ. ನರಸಿಂಹಮೂರ್ತಿಯ ಮೇಲೆ ಪ್ರಕರಣ ದಾಖಲೆ ಮಾಡಿದ್ದು, ನರಸಿಂಹಮೂರ್ತಿ ಪೋಲೀಸರ ಅಥಿತಿಯಾಗಿದ್ದಾನೆ.

Leave A Reply