ಗುರು ಕರುಣೆ

0

ಡಾ. ಈಶ್ವರಾನಂದ ಸ್ವಾಮೀಜಿ

ಗುರು ಕರುಣಿಸಲು ಸಂಸಾರ ವಿಷಯ ಕೆಟ್ಟಿತ್ತು
ಮಾಯಾ ಪ್ರಪಂಚ ಬಿಟ್ಟಿತ್ತು
ಹುಟ್ಟರತು ಹೋಯಿತ್ತು
ನೆಟ್ಟಗೆ ಗುರು ಪಾದವ ಮುಟ್ಟಿ ಭವಗೆಟ್ಟೆನು ಕಾಣಾ ರಾಮನಾಥ.

ದೇವರ ದಾಸಿಮಯ್ಯನವರು ಪ್ರಸ್ತುತ ವಚನದಲ್ಲಿ ಗುರು ಮಹಿಮೆ ಪ್ರಸ್ತಾಪಿಸುತ್ತ ವಿಷಯವನ್ನಿಳಿಸಲು ಅಮೃತಬೇಕು, ಆ ಅಮೃತ ಗುರುವಿನ ಹತ್ತಿರವಿದೆ ಎಂದಿದ್ದಾರೆ. ಸಂಸಾರ ಎಂದರೆ ದುಃಖ, ಹೆಂಡತಿ ಮಕ್ಕಳಿಂದ ಕೂಡಿದ ಪ್ರಪಂಚ, ಹಿಟ್ಟು-ಸಾವುಗಳ ಆಗರ (ಸ್ಥಳ). ಇದು ವಿಷದಿಂದ ಕೂಡಿದೆ. ಈ ವಿಷವನ್ನು ಕಳೆಯಲು ಗುರು ಕರುಣೆಯೆಂಬ ಅಮೃತ ಸದೃಶ ಅಂತಃಕರುಣೆಯ ಆಶೀರ್ವಾದಬೇಕು. ವ್ಯಕ್ತಿಯು ಯಾವುದನ್ನು ನೆನೆಯದೆ ಕೇವಲ ಗುರು ಪಾದ ಸ್ಮರಿಸುತ್ತ, ಗುರು ಆಶೀರ್ವಾದದ ಇಚ್ಚೆ ಉಳ್ಳವನಾದಾಗ ಮಾತ್ರ ಗುರುವಿನ ಆಶೀರ್ವಾದದಿಂದ ಸಂಸಾರದ ವಿಷವು ನಾಶವಾಗಿ ಸಸಾರವಾಗುತ್ತದೆ. ಅಜ್ಞಾನ, ಅಂಧಕಾರ, ಮಾಯೆ, ಮೋಹ ಮೊದಲಾದವುಗಳು ನಾಶವಾಗುತ್ತವೆ.

ಒಮ್ಮೆ ಗುರು-ಶಿಷ್ಯರಿಬ್ಬರು ಸಂಚಾರ ಮಡುತ್ತ, ಅರಣ್ಯ ಮಾರ್ಗವಾಗಿ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕ್ರೂರ ಪ್ರಾಣಿಗಳಿವೆ ಎಂದು ಜನರಿಂದ ಕೇಳಿದ ಇರ್ವರು ಸರದಿಯಂತೆ ನಿದ್ರೆ ಮಾಡಿದರು. ಶಿಷ್ಯನು ಮಲಗಿದಾಗ ಸರ್ಪವೊಂದು ಕಚ್ಚಲು ಬಂದಿತು. ಆ ಸರ್ಪಕ್ಕೆ ಗುರುಗಳು ನನ್ನ ಶಿಷ್ಯ ಮಲಗಿದ್ದಾನೆ. ಅವನನ್ನು ರಕ್ಷಿಸುವ ಜವಬ್ದಾರಿ ನನ್ನದಾಗಿದೆ. ನೀನು ಅವನಿಗೆ ಏನನ್ನು ಮಾಡದೆ ಹೊರಟು ಹೋಗು ಎಂದಾಗ ಆ ಸರ್ಪವು ನಿಮ್ಮ ಶಿಷ್ಯನು ನನ್ನ ಏಳು ಜನ್ಮದ ಶತ್ರು ಆಗಿದ್ದಾನೆ. ಅವನನ್ನು ಕಚ್ಚಿ ಸಾಯಿಸಬೇಕು. ಅವನ ಬಿಸಿ ರಕ್ತದ ರುಚಿ ನೊಡಬೇಕು. ನನ್ನ ತಡೆಯಬೇಡಿ ಗುರುಗಳೆ ಎಂದಾಗ ಗುರುಗಳು ಅವನ ರಕ್ತದ ರುಚಿ ನೊಡಬೇಕು ತಾನೆ ? ಒಂದು ನಿಮಿಷ ಇರು ಎಂದು ತಮ್ಮ ಜೊಳಿಗೆಯಿಂದ ಚಾಕು ತಗೆದು ಶಿಷ್ಯನ ದೇಹದಿಂದ ರಕ್ತ ತಗೆದು ಸರ್ಪದ ಮುಂದೆ ಹಿಡಿದು, ನಿನ್ನ ಸೇಡು ತಿರಿಸಿಕೊ ರಕ್ತದ ಸಿಹಿ ನೋಡು. ಅವನಿಗೆ ನೀನು ಕಚ್ಚಿದರೂ ಸಹ ಎಷ್ಟು ರಕ್ತ ಕುಡಿಯಬಲ್ಲೆ ? ಅದಕಿಂತಲೂ ಹೆಚ್ಚು ರಕ್ತ ಕೊಟ್ಟಿದ್ದೇನೆ. ಕೂಡಿದು ಸಂತೋಷ ಹೊಂದು ಎಂದರು. ಆಗ ಗುರುವಿನ ಉಪಾಯ ಮತ್ತು ಶಕ್ತಿಗೆ ಮೆಚ್ಚಿ ಸರ್ಪವು ಗುರುವಿಗೆ ನಮಸ್ಕರಿಸಿ ರಕ್ತ ಕುಡಿದು ತನ್ನ ಜನ್ಮ ಕೃತಾರ್ಥ ಮಡಿಕೊಂಡಿತು. ಸರ್ಪವು ಹೋದ ನಂತರ ಶಿಷ್ಯನಿಗೆ ಗುರುಗಳು ತನು ಚಾಕುವಿನಿಂದ ಶರೀರದಿಂದ ರಕ್ತ ತಗೆಯುವಾಗ ನಿನಗೆ ಭಯವಾಗಲಿಲ್ಲವೆ ? ಎಂದಾಗ ಶಿಷ್ಯನು ಹೇ ! ಗುರುನಾಥ ನನ್ನ ಕಾಯುವ, ಕೊಲ್ಲುವ ಶಕ್ತಿ ನಿನಗಲ್ಲವೆ ? ನಿಮ್ಮ ಮತ್ತು ಸರ್ಪದ ಸಂಭಾಷಣೆ ನನು ಕೆಳಿರುವೆ. ಆ ಸರ್ಪದಿಂದ ನನ್ನ ಪ್ರಾಣ ಉಳಿಸಿರುವೆ ಎಂದು ಮತ್ತೆ ಮತ್ತೆ ನಮಸ್ಕರಿದನು.

ಪ್ರಸ್ತುತ ಕಥೆಯಿಂದ ತಿಳಿಯುವುದೆನಂದರೆ ಗುರುವಿನ ಆಶೀರ್ವಾದದಿಂದ ಶಿಷ್ಯನು ತನ್ನ ಪ್ರಾಣವನ್ನೇ ರಕ್ಷಿಸಿಕೊಂಡನು. ಹಾಗೆಯೇ ಪ್ರತಿಯೊಬ್ಬ ವ್ಯಕ್ತಯು ಸಹ ಉತ್ತಮ ಗುರುಗಳನ್ನು ಗುರುತಿಸಿ ಅವರ ಆಶೀರ್ವಾದ ಮತ್ತು ದೇವರ ಧ್ಯಾನಗಳಿಂದ ಸರ್ಪ ಮೊದಲಾದ ದುಷ್ಟ ಕಂಟಕದಿಂದ ಬಿಡುಗಡೆ ಹೊಂದಿ ಜೀವನ ಪವಿತ್ರಗೊಂಡು ಶರೀರವೇ ಲಿಂಗಮಯವಾಗುವುದರಲ್ಲಿ ಸಂದೆಹವೇ ಇಲ್ಲ. ಎಂದು ದೇವರ ದಾಸಿಮಯ್ಯನವರು ಕೆಳಗಿನ ವಚನದಲ್ಲಿ ವ್ಯಕ್ತ ಪಡಿಸಿದ್ದಾರೆ.

ಉರಿವ ಕೆಂಡದ ಮೇಲೆ ತೃಣವ ತಂದಿರಿಸಿದಡೆ
ಆ ತೃಣವನಾ ಕೆಂಡ ನುಂಗಿದಂತೆ
ಗುರು ಚರಣದ ಮೇಲೆ ತನುವೆಂಬ ತೃಣವನಿರಿಸಿದಡೆ
ಆತನ ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply