ಹುಬ್ಬಳ್ಳಿ – ಆಧುನಿಕರಣದಿಂದಾಗಿ ಪ್ರಮುಖ ಗುಡಿ ಕೈಗಾರಿಕೆಗಳಲ್ಲಿ ಒಂದಾದ ಬಿದುರಿನ ಬುಟ್ಟಿಗೆ ಬೇಡಿಕೆ ಕುಸಿಯುತ್ತಿದೆ. ಈ ನಡುವೆ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಿಸಿದ್ದು, ವ್ಯಾಪಾರವಿಲ್ಲದೇ ಬಿದಿರಿನ ಬುಟ್ಟಿ ಮಾರುವವರ ಬದುಕು ಮೂರಾಬಟ್ಟೆಯಾಗಿದೆ.ಲಾಕ್‌ಡೌನ್ ಬಳಿಕ ನಮ್ಮ ವ್ಯಾಪಾರ ಸಂಪೂರ್ಣ ನಿಂತುಹೋಗಿದೆ. ಜೀವನ ನಡೆಸುವುದೇ ಕಷ್ಟವಾಗಿದೆ. ದುಡಿಯುವ ವರ್ಗಕ್ಕೆ ಪರಿಹಾರ ಕೊಡುತ್ತೇವೆ ಎಂದ ಸರ್ಕಾರ, ಹಲವಾರು ವರ್ಗಗಳಿಗೆ ಪರಿಹಾರ ನೀಡಿದೆ.

ಆದರೆ, ನಮ್ಮಂಥವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರಿಂದ ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಹೊಸ ಹುಬ್ಬಳ್ಳಿ ಮೇದಾರ್  ಓಣಿಯ ಬಿದುರಿನ ಬುಟ್ಟಿ ವ್ಯಾಪಾರಿಗಳು ಅಳಲು ತೋಡಿಕೊಂಡರು. ಬಿದಿರಿನ ಬುಟ್ಟಿ ವ್ಯಾಪಾರಿ ವಿನಾಯಕ್ ಬಮ್ಮಿಗಟ್ಟಿ    ಮಾತನಾಡಿ, ಲಾಕ್‌ಡೌನ್‌ಗೂ ಮೊದಲು ದಿನಕ್ಕೆ 2 ಸಾವಿರದಿಂದ 3 ಸಾವಿರ ರೂ. ವ್ಯಾಪಾರವಾಗುತ್ತಿತ್ತು. ಇದೀಗ 200 ರಿಂದ 300 ರೂ. ಕೂಡ ಆಗುತ್ತಿಲ್ಲ.

ಅಗತ್ಯ ವಸ್ತುಗಳ ಮಾರಾಟದ ಸಮಯದ ಮಿತಿ ಮುಗಿದ ಕೂಡಲೇ ಪೊಲೀಸರು ಬಂದು ನಮ್ಮನ್ನು ಮನೆಗೆ ತೆರಳುವಂತೆ ತಿಳಿಸುತ್ತಾರೆ. ಈಗ ಮದುವೆ ಸೀಸನ್ ಇದ್ದರೂ ನಮ್ಮ ಬಿದಿರಿನ ಬುಟ್ಟಿ ಮತ್ತಿತರ ಸಾಮಗ್ರಿಗಳನ್ನು ಕೇಳುವವರೇ ಇಲ್ಲದಂತಾಗಿದೆ.ಬಿದರಿನ ಕಚ್ಚಾ ವಸ್ತು ವಾಹನಗಳ ಓಡಾಟ ಸ್ಥಗಿತವಾಗಿರುವುದರಿಂದ ಅವು ಬರುತ್ತಿಲ್ಲ. ನಮಗೆ  ಗೊತ್ತಿರುವ ಒಂದೇ ಒಂದು ಉದ್ಯೋಗ ಮಾಡಲು ನಾವು ಪರದಾಡುವಂತಾಗಿದೆ. ಸರ್ಕಾರ ನಮ್ಮಂತವರಿಗೆ ಪರಿಹಾರ ಕೊಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply