ಬಳ್ಳಾರಿ-  ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಮಾಜಿ ಸಚಿವ ಟಿ.ಬಿ ಜಯಚಂದ್ರ ಆಕ್ರೋಶ ಹೊರಹಾಕಿದ್ದಾರೆ. ಬಳ್ಳಾರಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಡೆಲ್ಲಿಯಲ್ಲಿ 43 ದಿನಗಳ ಆಹೋರಾತ್ರಿ ಹೋರಾಟ ನಡೆಸಿದರೂ ಕೇಂದ್ರ ಸರ್ಕಾರ ತನ್ನ ನಿರ್ಣಯ ಹಿಂಪಡೆತಿಲ್ಲ.

ಇದುವರೆಗೂ ರೈತ ವಿರೋಧಿ ಕಾಯ್ದೆ ವಿರುದ್ಧ ಹೋರಾಟದಲ್ಲಿ 50 ರೈತರು ಸಾವಿಗೀಡಾಗಿದ್ದಾರೆ. ಆದರು ಕೇಂದ್ರ ಸರ್ಕಾರ ಮಣಿಯುತ್ತಿಲ್ಲ, ಹಾಗಾದರೆ ಕೆಂದ್ರಕ್ಕೆ ಇನ್ನೇಷ್ಟು ರೈತರ ಬಲಿ ಬೇಕು, ಎಂದು ಬಳ್ಳಾರಿಯಲ್ಲಿ ಮಾಜಿ ಸಚಿವ ಜಯಚಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಕಾಯ್ದೆ ರೈತ ಕರಾಳ ಶಾಸನ ವಾಗಿದೆ. ರೈತರ ಏಳ್ಗೆಯ ವಿರೋಧಿಯಾದ ಎಪಿಎಂಸಿ ಕಾಯ್ದೆ ಜೊತೆ ಮೂರು ಕಾಯ್ದೆಗಳ ಜಾರಿಗೆಗೆ ಕೇಂದ್ರ ಸರ್ಕಾರ ಮುಂದಾಗುತ್ತಿದೆ. ಈ ಕಾಯ್ದೆಯನ್ನ ಜಾರಿಗೆ ತಂದರೆ ರೈತ ಸಮುದಾಯಕ್ಕೆ ಅತ್ಯಂತ ಅಪಾಯವಾಗಿದೆ. ಮುಖ್ಯವಾಗಿ ಈ ಕಾಯ್ದೆ ಉದ್ದೇಶ ಬಂಡವಾಳಶಾಹಿಗಳ ಪರವಾಗಿದೆ ಎಂದರು. ಇನ್ನು  ಕೃಷಿ ಅತ್ಯಮೂಲ್ಯ ವಿಷಯ, ಅದನ್ನು ಒಂದು ಮಾದರಿ ಕಾಯ್ದೆ ಮಾಡಿ ಚರ್ಚೆ ಮಾಡಬೇಕಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ಮುಂದಾಗುವುದು ಫೆಡರಲ್ ರಚನೆಗೆ ಹಿನ್ನೆಡೆಯಾಗಿದೆ. ಹಾಗೂ ಭಾತರದ ಒಕ್ಕೂಟ ವ್ಯವಸ್ಥೆಗೆ ವಿರುದ್ದವಾಗಿ ಇದನ್ನ ನಾವು ಒಪ್ಪುವುದಿಲ್ಲ ಎಂದರು. ಭಾರತ ದೇಶ ಕೃಷಿ ಪ್ರಧಾನ ದೇಶ.ಇಂದಿಗೂ ಹಳ್ಳಿಗಳಲ್ಲಿ ವ್ಯವಸಾಯವೇ ಮೂಲ ಕಸುಬು. ಹೀಗಾಗಿ ರೈತರ ಅಧಿಕಾರದ ದಿನದ ಅಂಗವಾಗಿ ರೈತರಿಗೆ ಸರ್ಪೋಟಿವ್ ಕಾಂಗ್ರೆಸ್ ನಿಂದ ನಾಳೆ ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ಇದೆ. ಬೆಂಗಳೂರಿನ ಪ್ರಿಡಂ ಪಾರ್ಕ್ ನಿಂದ ರಾಜಭವನದವರೆಗೆ ಮೆರವಣಿಗೆ ನಡೆಯಲಿದೆ ಇದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಯಾಗಲಿದೆ ಎಂದ ಮಾಜಿ ಸಚಿವ ಜಯಚಂದ್ರ ತಿಳಿಸಿದರು.

About Author

Priya Bot

Leave A Reply