ಆಂಬುಲೆನ್ಸ್ ಖರದಿಗೆ ಹಣ ಬಂದಿದೆ :ಸೇವಾ ಭಾರತಿ

0

ಗುಳೇದಗುಡ್ಡ: ಕಳೆದ 17 ವರ್ಷಗಳಿಗಳಿಂದ ಗುಳೇದಗುಡ್ಡ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ಜಾಗೃತಿಯಲ್ಲಿ ತೊಡಗಿಕೊಂಡಿರುವ ಗುಳೇದಗುಡ್ಡದ ಸೇವಾಭಾರತಿಯ “ಸಂಚಾರಿ ಚಿಕಿತ್ಸಾಲಯ” ಪ್ರಕಲ್ಪಕ್ಕೆ ನಗರದ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯು ನೂತನ ಅಂಬ್ಯುಲೆನ್ಸ್ ಖರೀದಿಸಲು ಧನಸಹಾಯ ರೂಪದಲ್ಲಿ ಅಗಸ್ಟ್ 2019 ರಲ್ಲಿಯೇ ವಾಹನದ ಪೂರ್ಣ ಮೊತ್ತವನ್ನು ನೀಡಿರುತ್ತಾರೆ ಅಧ್ಯಕ್ಷ ಸಂಜಯ ಕರಕೂ ತಿಳಿಸಿದ್ದಾರೆ.

ಸೇವಾಭಾರತಿಯು ದೇಣಿಗೆ ಹಣ ಮುಟ್ಟಿದ ತಕ್ಷಣ ಸೆಪ್ಟೆಂಬರ್ 2019 ರಲ್ಲಿಯೇ ರೇವಣಕರ ಮೋಟಾರ್ ಹುಬ್ಬಳ್ಳಿ ಇವರಿಗೆ ಅಂಬ್ಯುಲೆನ್ಸ್ ಖರೀದಿಗಾಗಿ ಎರಡು ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಕೊಡಲಾಗಿದೆ. ವಾಹನದ ಮೊಡೆಲ್ ಹಾಗೂ ಇನ್ನಿತರ ನಿಯಮಗಳ ಪರಿಣಾಮ ಹಾಗೂ ಲಾಕ್‌ಡೌನದಿಂದಾಗಿ ಅಂಬ್ಯುಲೆನ್ಸ್ ವಾಹನವು ಲಭ್ಯವಿಲ್ಲದಿರುದರಿಂದ ಖರೀದಿಯು ತಡವಾಗಿರುತ್ತದೆ. ಶೀಘ್ರದಲ್ಲಿ ವಾಹನ ಬರಲಿದ್ದು ಸೇವಾ ಕಾರ್ಯಕ್ಕೆ ಅರ್ಪಿಸಲಾಗುವುದು. ಲಕ್ಷ್ಮೀ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಘೋಷಿಸಿದಂತೆ ಅಂಬ್ಯುಲೆನ್ಸ್ ವಾಹನದ ಪೂರ್ಣ ಮೊತ್ತವನ್ನು ಸೇವಾಭಾರತಿಗೆ ಭರಿಸಿರುತ್ತಾರೆ ಅವರು ಎಂದು ತಿಳಿಸಿದ್ದಾರೆ.

IMG_20210619_141715.jpg

Email

Basavaraj Yandigeri

About Author

Basavaraj Yandigeri

Leave A Reply