ಬಳ್ಳಾರಿ- ಆಸ್ಪತ್ರೆಗೆ ಸಾಗಿಸುವ  ಮಾರ್ಗಮಧ್ಯದಲ್ಲಿ 108 ಅಂಬ್ಯುಲೆನ್ಸ್  ನಲ್ಲಿಯೇ ತಾಯಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ  ಬಂಡ್ರಿ ಗ್ರಾಮದ ರಾಧ ಗಂಡ ರಾಜೇಶ, ಕೂಡ್ಲಿಗಿ 108 ಅಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತುಂಬು ಗರ್ಭಿಣಿ ಬಂಡ್ರಿ ಗ್ರಾಮದ ರಾಧಳಿಗೆ ಭಾನುವಾರ ತುಂಬಾ ಹೆರಿಗೆ ಬೇನೆ ಕಾಣಿಸಿದೆ. ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿತ್ತು. ರಕ್ತ ದೊತ್ತಡ ಹೆಚ್ಚಾಗಿರುವ ಕಾರಣಕ್ಕೆ, ಸಂಡೂರು ಸಾರ್ವಜನಿಕ ಆಸ್ಪತ್ರೆಗೆ ತೆರಳುವ ವ್ಯವಸ್ಥೆ ಮಾಡಲಾಗಿದೆ. ಕೂಡ್ಲಿಗಿಯ ನಾಗರಾಜ ಹಾಗೂ ಶ್ರೀಕಾಂತ್ ರವರು,ಗರ್ಭಿಣಿಯನ್ನ ಸಂಡೂರಿಗೆ  108 ವಾಹನದಲ್ಲಿ ಕರೆದೊಯ್ಯುವಾಗ, ಮಾರ್ಗಮಧ್ಯ ವಾಹನದಲ್ಲಿಯೇ ಸಹಜ ಹೆರಿಗೆಯಾಗಿದೆ ತಾಯಿ ಮಗು ಆರೋಗ್ಯವಾಗಿದ್ದಾರೆ.

Leave A Reply