ಬೆಂಗಳೂರು – ಮಾಜಿ ಮುಖ್ಯಮಂತ್ರಿ ದಿ. ಧರಂಸಿಂಗ್ ಸಂಬಂಧಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವ ಪಡೆದುಕೊಂಡಿದೆ. ಈ ಮೊದಲು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು ತನಿಖೆ ನಡೆಸಿದ ಪೊಲೀಸರಿಗೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹೌದು
ಸಿದ್ಧಾರ್ಥ್ ದೇವೆಂದರ್(28) ಅವರ ತಂದೆ ದೇವೇಂದರ್ ಅವರು ತಮ್ಮ ಮಗ ನಾಪತ್ತೆ ಆಗಿದ್ದಾರೆ ಎಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದಾಸರಹಳ್ಳಿಯ ನಿವಾಸಿಯಾಗಿರುವ ಸಿದ್ಧಾರ್ಥ್ ತಂದೆ ಸಿ.ಆರ್. ದೇವೇಂದರ್ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಡೆಸಿದ್ದರು. ಜನವರಿ 19 ರಂದು ಸ್ನೇಹಿತರನ್ನು ಭೇಟಿಯಾಗುವ ಸಲುವಾಗಿ ಸಿದ್ದಾರ್ಥ್ ಅಮೆರಿಕಾಕ್ಕೆ ಹೋಗಿ ಬರುವುದಾಗಿ ಮನೆಯವರಿಗೆ ಮಾಹಿತಿ ನೀಡಿ ಹೋಗಿದ್ದರು. ಕೊನೆಯದಾಗಿ ಈತ ತಂದೆಗೆ ಸ್ನೇಹಿತರ ಬೇಟಿ ಮಾಡಿ ಬರುವುದಾಗಿ ಸಂದೇಶ ನಕಳುಹಿಸಿದ್ದರು. ಆದಾದ ಬಳಿಕ ಅವರ ಮೊಬೈಲ್ ಸಂಪರ್ಕ ಕಡಿತವಾಗಿತ್ತು. ಬಳಿಕ ಅವರ ತಂದೆ ಮಗ ಮೂರು ದಿನಗಳ ಬಳಿಕ ಕಾಣದಾದಾಗ ಅಮೇರಿಕಾದ ಅವರ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಸಿದ್ದಾರ್ಥ ಅಲ್ಲಿಗೆ ಬಂದಿಲ್ಲಾ ಎಂಬ ಮಾಹಿತಿ ದೊರೆತ ಬಳಿಕ ಸಿದ್ಧಾರ್ಥ್ ಅಮೇರಿಕಾಕೆ ಹೋಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ದೇವೇಂದರ್, ಮಗ ಕಾಣೆಯಾಗಿದ್ದಾನೆ ಎಂದು ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ. ಆದ್ರೆ ಮೊದಲು ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪರಿಚಿತ ರಾಜ್ಯದಲ್ಲಿ ಸಿಗುವ ಎಲ್ಲಾ ಅಪರಿಚಿತ ಶವಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳಿಕ ಅಂತರ್ ರಾಜ್ಯದಲ್ಲಿ ಪತ್ತೆಯಾಗುವ ಶವಗಳ ಬಗ್ಗೆ ಮಾಹಿತಿ ಪಡೆದಾಗ ಆಂಧ್ರಪ್ರದೇಶದ ನೆಲ್ಲೂರು ಅರಣ್ಯ ಪ್ರದೇಶದಲ್ಲಿ ಅಪರಿಚಿತರು ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವ್ಯವಸ್ಥಿತವಾಗಿ ಸಿದ್ದಾರ್ಥ್ನನ್ನು ಅಪಹರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಅಮೃತಹಳ್ಳಿ ಪೊಲೀಸರ ತಂಡ ನೆಲ್ಲೂರಿಗೆ ಪ್ರಯಾಣ ಬೆಳೆಸಿ ಕೊಲೆಗಾರರಿಗೆ ಬಲೆ ಬೀಸಿದೆ….