ಬಳ್ಳಾರಿ ಹೊಲಕ್ಕೆ ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಧಾರುಣವಾಗಿ  ಕೊಲೆ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ  ಹೊಸಪೇಟೆ ತಾಲೂಕಿನ ಕಾಳಗಟ್ಟ ಗುಡ್ಡದಲ್ಲಿ ಹೊಲಕ್ಕೆ ಕೆಲಸಕ್ಕೆಂದು ಹೊಗುತ್ತಿದ ಮಹಿಳೆಗೆ ಅಡ್ಡಗಟ್ಟಿ ಕೊಲೆ ಮಾಡಿದ್ದಾರಡ. ಮೃತ ದುರ್ದೈವಿಯನ್ನು  ನಾಗಮ್ಮ (45 ) ಎಂದು ಗುರುತಿಸಲಾಗಿದ್ದು, ಮೂಲತಃ ನಾಗೇನಹಳ್ಳಿ ಗ್ರಾಮದ ನಿವಾಸಿ  ಎಂದು ಪತ್ತೆ ಹಚ್ಚಲಾಗಿದೆ. ನಾಗಮ್ಮನನ್ನು ಕುಡುಗೋಲಿನಿಂದ ಕುತ್ತಿಗೆಯನ್ನು ಕಡಿದು, ಕಲ್ಲಿನಿಂದ ತಲೆಯನ್ನು  ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ದಾರಿ ಹೋಕರು ಶನಿವಾರ ತಡರಾತ್ರಿ ನಾಗಮ್ಮನ ಶವ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವ ಪತ್ತೆಯಾದ ಸ್ಥಳಕ್ಕೆ ರವಿವಾರ ಬೆಳಿಗ್ಗೆ ಡಿವೈಎಸ್ಪಿ ರಘುಕುಮಾರ ಹಾಗೂ ಗ್ರಾಮೀಣ ಪೋಲೀಸ್ ಠಾಣೆಯ ಪಿಐ ಶ್ರೀನಿವಾಸ ಮೇಟಿ ಅವರು ಬೇಟಿ ನೀಡಿ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಈ ಕೊಲೆಗೆ ಯಾವುದೇ ಸರಿಯಾದ ಕಾರಣ ದೊರೆತಿಲ್ಲ. ಹೊಸಪೇಟೆ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಕೊಲೆಗಾರರ ಪತ್ತೆಯ ಕಾರ್ಯದಲ್ಲಿ ತೊಡಗಿದ್ದಾರೆ.

Leave A Reply