ಕೆಎಸ್​​ಆರ್​​ಟಿಸಿ ಲೋಗೋ ವಿವಾದ  ಕುರಿತು ಕಾನೂನು ಸಲಹೆ ಪಡೆದು ಮುಂದಿನ ನಿರ್ಧಾರ; ಸಾರಿಗೆ ಸಚಿವ ಲಕ್ಷ್ಮಣ ಸವದಿ.

0

ರಾಯಚೂರು – ಕೇರಳ-ಕರ್ನಾಟಕ ಮಧ್ಯೆ ಕೆಎಸ್​​ಆರ್​​ಟಿಸಿ ಲೋಗೋ ವಿವಾದ ವಿಚಾರದಲ್ಲಿ ಟ್ರೇಡ್ ಮಾರ್ಕ್ ರಿಜಿಸ್ಟರ್​​ನಲ್ಲಿ ವಾಜ್ಯ ಆದೇಶ ಹೊರಬಿದ್ದಿತ್ತು ಈ ಬಗ್ಗೆ ಕಾನೂನಾತ್ಮಕ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ರಾಯಚೂರು ಜಿಲ್ಲೆಯಲ್ಲಿ ಮಾತನಾಡಿದ ಅವರು, ಖಾಸಗಿ ಮತ್ತು ಕಾರ್ಪೋರೇಟ್ ಕಂಪನಿಗಳು ಒಂದೇ ಹೆಸರಿನಲ್ಲಿ ಇರಬಾರದು ಎಂಬ ನಿಯಮವಿದೆ. ನಮ್ಮ ದೇಶದಲ್ಲಿ ಮತ್ತು ಬೇರೆ ದೇಶದಲ್ಲಿ ಈ ನಿಯಮವಿದೆ. ಕೇರಳ-ಕರ್ನಾಟಕ ಲಾಭದಾಯಕ ಕಾರ್ಪೋರೇಟ್ ಕಂಪನಿಗಳಲ್ಲ. ನಮ್ಮದು ಸಾರ್ವಜನಿಕರಿಗೆ ಸೇವೆ ನೀಡುವ ಸಂಸ್ಥೆಗಳಾಗಿವೆ. ಅದರ ಹೆಸರಿನಲ್ಲಿ ನಾವು ಲಾಭ ಮಾಡುವುದಿಲ್ಲ. ಅನವಶ್ಯಕವಾಗಿ ಗೊಂದಲ ಸೃಷ್ಟಿಯಾಗಿದೆ.

ನಾನು ಅಧಿಕಾರಿಗಳಿಗೆ ಆದೇಶದ ಪ್ರತಿ ಪಡೆಯಲು ಹೇಳಿದ್ದೇನೆ. ಆ ಆದೇಶ ನೋಡಿ ಕಾನೂನು ಸಲಹೆ ಪಡೆದು ಮನವಿ ಮಾಡುವುದರ ಬಗ್ಗೆ ತೀರ್ಮಾನಿಸಲಾಗುವುದು. ಇನ್ನು  ಸದ್ಯ ಬ್ಲ್ಯಾಕ್​​ ಫಂಗಸ್ ಪ್ರಕರಣಗಳು ನಮಗೆ ಸವಾಲಾಗಿವೆ. ಜಿಲ್ಲೆಯಲ್ಲಿ 41 ಜನರಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿವೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಬ್ಲ್ಯಾಕ್​ ಫಂಗಸ್ ಸೋಂಕಿತರಿಗೆ 40-45 ದಿನ ಚಿಕಿತ್ಸೆ ಕೊಡಬೇಕಾಗುತ್ತೆ‌. ಅವರಿಗೆ ಸರ್ಕಾರ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ ಎಂದರು.

ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಪ್ರತಿಕ್ರಿಯಿಸಿ, ಇಂದು ಅಥವಾ ನಾಳೆ ತಜ್ಞರ ಅಭಿಪ್ರಾಯ ಪಡೆದು, ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. 7000ದವರೆಗೆ ಪಾಸಿಟಿವ್ ಬರುವವರೆಗೂ ತಜ್ಞರು ಲಾಕ್​ಡೌನ್ ಮುಂದುವರೆಸಲು ಸಲಹೆ ನೀಡಿದ್ದಾರೆ ಎಂದರು. ಜಿಲ್ಲೆಯಲ್ಲಿ ರಿಮ್ಸ್​​ನಲ್ಲಿ 20kl ಆಕ್ಸಿಜನ್ ಘಟಕ ಇಂದಿನಿಂದ ಪ್ರಾರಂಭವಾಗಲಿದೆ. 30 ಆಕ್ಸಿಜನ್ ಕಾನ್ಸ್ಂಟ್ರೇಟರ್ ಬಂದಿವೆ. ಮುಂದಿನ ದಿನಗಳಲ್ಲಿ ನಾವ್ಯಾರೂ ಮೈ ಮರೆಯುವಂತಿಲ್ಲ. ಆ ರೀತಿಯಲ್ಲಿ ಎಲ್ಲಾ ಮುಂಜಾಗ್ರತೆ ವಹಿಸಲಾಗಿದೆ ಎಂದು ಹೇಳಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply