ಪುಟ್ಪಾತ್ ಅಂಗಡಿಗಳ ತೆರವಿಗೆ ಒಂದು ವಾರ ಗಡವು- ತಹಶಿಲ್ದಾರ ಜಿ.ಅನಿಲ್ ಕುಮಾರ್

0

ಬಳ್ಳಾರಿ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪುಟ್ಬಾತ್ ನಿರ್ಮಿಸಿದ್ದು ಇದನ್ನು ಅತಿಕ್ರಮಿಸಿ ಅಂಗಡಿಗಳು ಹೋಟೆಲ್ ಹಾಕಿಕೊಂಡಿದ್ದು ಒಂದು ವಾರದೊಳಗೆ ತೆರವುಗೊಳಿಸಬೇಕೆಂದು ಪುಟ್ಬಾತ್ ಅಂಗಡಿ ಮಾಲೀಕರಿಗೆ ತಹಶಿಲ್ದಾರ ಜಿ. ಅನಿಲ್ ಕುಮಾರ್ ಸೂಚಿಸಿದ್ದಾರೆ.

ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ನಡೆದ ಪುಟ್ಬಾತ್ ಅಂಗಡಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಪಟ್ಟಣದ ಸ್ವಚ್ಛತೆಗಾಗಿ ಪಾದಚಾರಿಗಳ ಹಿತದೃಷ್ಟಿಯಿಂದ ಸರ್ಕಾರಿ ಬಸ್ ನಿಲ್ದಾಣ, ಹರಪನಹಳ್ಳಿ ರಸ್ತೆ, ಇಟಗಿ ರಸ್ತೆ, ಬಯಲು ಬಸವೇಶ್ವರ ದೇವಸ್ಥಾನ, ಸೇರಿದಂತೆ ಪಟ್ಟಣದಲ್ಲಿನ ಸರ್ಕಾರಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡಿರುವರು ಸ್ವಯಂ ಪ್ರೇರಿತರಾಗಿ ತರುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.

ನಂತರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎಸ್. ಟಿ. ಗಿರೀಶ್ ಮಾತನಾಡಿ ನೀವು ನಿಮ್ಮ ವ್ಯಾಪಾರ ದೃಷ್ಟಿಯಿಂದ ಆಲೋಚನೆ ಮಾಡದೆ ಕಾಲುವೆಗಳಲ್ಲಿ ಚೆಲುವ ಕಸ ಮತ್ತು ತ್ಯಾಜ್ಯಗಳಿಂದ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ಮಳೆ ಬಂದಾಗ ಕೆಲ ಕಾಲೋನಿಗಳಿಗೆ ನೀರು ನುಗ್ಗೆ ಅವಾಂತರ ಸೃಷ್ಟಿಸಿದ್ದು ಇದಕ್ಕೆ ಮೂಲಕಾರಣ ಪುಟ್ ಬಾತ್ ಮೇಲಿನ ಅಂಗಡಿಗಳೇ ಆದ್ದರಿಂದ ಪಟ್ಟಣದ ಸ್ವಚ್ಛತೆಗೆ ತಾವೆಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಸ್ಕಾಂ ಇಲಾಖೆ ಜೆಇ ಚೇತನ್, ಲೋಕೋಪಯೋಗ ಇಲಾಖೆ ಜೆಇ ಖಾಜಾಹುಸೇನ್, ಪೊಲೀಸ್ ಇಲಾಖೆ ಎಎಸ್ಐ ರುದ್ರಮುನಿ, ಮತ್ತು ಪಟ್ಟಣದ ಅಂಗಡಿ, ಹೋಟೆಲ್ ಮತ್ತು ಪುಟ್ ಬಾತ್ ವ್ಯಾಪಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

IMG_20210628_155802.jpg

Email

Huligesha tegginakeri

About Author

Huligesha Tegginakeri

Leave A Reply