ರಾಜ್ಯ ಸರಕಾರ ಘೋಷಿಸಿದ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ: ಆನಂದ ಕೆ.ಎಸ್.

0

ಮಂಗಳೂರು  – ಅಸಂಘಟಿತ ಕಾರ್ಮಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಟೈಲರ್ ವೃತ್ತಿ ಬಾಂಧವರಿಗೆ ರಾಜ್ಯ ಸರಕಾರ ಘೋಷಿಸಿದ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಕೆಎಸ್‌ಟಿಎ ರಾಜ್ಯಾಧ್ಯಕ್ಷ ಆನಂದ ಕೆ.ಎಸ್. ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು ನಗರದ ಗೋರಿಗುಡ್ಡೆಯಲ್ಲಿರುವ ಟೈಲರ್ ಭವನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಟೈಲರ್‌ಗಳು ತಾವು  ಅಸಂಘಟಿತ ಕಾರ್ಮಿಕರು ಎಂದು ರುಜುವಾತು ಪಡಿಸಲು ಸರಕಾರ ಸೂಚಿಸಿದ ಅಧಿಕಾರಿಗಳ  ಬಳಿ ಸಹಿ  ಹಾಕಲು  ಹೋದಾಗ  ನೀವು ಲೈಸೆನ್ಸ್ ಮಾಡಿದ್ದೀರಾ ಎಂದು ಕೇಳುತ್ತಾರೆ. ನಾವು ಮನೆಯಲ್ಲಿಯೇ ಕೆಲಸ ಮಾಡುವುದು ಅಂತ ಪರಿ -ಪರಿಯಾಗಿ  ಹೇಳಿದರೂ ಸಹಿ ಹಾಕದೇ ವಾಪಸ್ ಕಳುಹಿಸುತ್ತಾರೆ. ಇದರಿಂದಾಗಿ ಟೈಲರ್‌ಗಳಿಗೆ ಸರಕಾರ ಘೋಷಿಸಿದ ಪ್ಯಾಕೇಜ್ ಪಡೆಯಲು ತೊಂದರೆಯಾಗುತ್ತಿದೆ.

ಹೀಗಾಗಿ ಈ ಗೊಂದಲವನ್ನು ನಿವಾರಿಸಬೇಕು. ಜೊತೆಗೆ ಕೋವಿಡ್‌ನಿಂದಾಗಿ ಟೈಲರ್‌ಗಳು ಅಂಗಡಿ ಬಾಗಿಲು ತೆರೆಯದೇ ಮನೆಯಲ್ಲಿಯೇ ಉಳಿಯುವಂತಾಗಿದೆ. ಇಂತಹ  ಕಷ್ಟದ  ಸಮಯದಲ್ಲಿ ಸರಕಾರ  ಘೋಷಣೆ ಮಾಡಿದ ಪ್ಯಾಕೇಜ್ ಮೊತ್ತ  ಎರಡು ಸಾವಿರ ರೂಪಾಯಿಯನ್ನು  ಪಡೆಯಲು  ಎಪಿಎಲ್  ಮತ್ತು ಬಿಪಿಎಲ್  ಎಂಬ ಮಾನದಂಡವನ್ನು  ನಿಗದಿ  ಪಡಿಸಿರುವುದು   ಟೈಲರ್ ವೃತ್ತಿ ಬಾಂಧವರಲ್ಲಿ ತಾರತಮ್ಯ ಮಾಡಿದಂತಾಗಿದೆ.  ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಪ್ರಜ್ವಲ್ ಕುಮಾರ್, ಕೆಎಸ್‌ಟಿಎ ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಬಿ. ವಸಂತ್, ನಗರ ಸಮಿತಿ ಮಾಜಿ ಅಧ್ಯಕ್ಷೆ ಕುಸುಮ ದೇವಾಡಿಗ ಉಪಸ್ಥಿತರಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply