ಬಳ್ಳಾರಿ- ಹೆಚ್ಚು ಹೆಚ್ಚು ಸೀಟ್ ಗಳನ್ನು ಗೆದ್ದರೆ ನಾವೂ ಏನೂ ಬೇಕಾದರೂ ಮಾಡಬಹುದು ಎನ್ನುವ ಹುಮ್ಮಸ್ಸಿನಲ್ಲಿ ಬಿಜೆಪಿ ಇದೆ. ಆದ್ರೆ ಈ ದೇಶದ ಜನರು ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿದ್ದಾರೆ. ಬಳ್ಳಾರಿಯಲ್ಲಿ ಕಚೇರಿ ಉದ್ಘಾಟನಾ ಬಳಿಮ ಮಾತನಾಡಿದ ಅವರು ಈಗಾಗಲೇ ಎನ್ಡಿಎ ಮೈತ್ರಿಕೂಟವನ್ನು ಅನೇಕ ಪಕ್ಷಗಳು ತೊರೆದಿವೆ. ಆದರೆ, ಯುಪಿಎ ಮೈತ್ರಿಕೂಟವನ್ನು ಈವರೆಗೂ ದೂರ ಮಾಡಿರುವ ಉದಾಹರಣೆ ಇಲ್ಲಾ. ಎನ್ಡಿಎ ಮೈತ್ರಿಕೂಟದಿಂದ ಈಗಾಗಲೇ 13 ಕ್ಕೂ ಹೆಚ್ಚು ದೇಶದ ಪ್ರಾದೇಶಿಕ ಪಕ್ಷಗಳು ಮೈತಿ ಇಂದು ದೂರ ಸರಿದಿವೆ. ಆದರೆ ಈವರೆಗೂ ಯುಪಿಎ ಮೈತ್ರಿಕೂಟದಿಂದ ಯಾವ ಪಕ್ಷವೂ ತೊರೆದಿಲ್ಲ. ಇತಿಹಾಸದಲ್ಲಿ ಅಂಥಹ ಉದಾಹರಣೆಗಳು ನಮ್ಮ ಮುಂದೆ ಇಲ್ಲವೇ ಇಲ್ಲಾ. ಈ ದೇಶದ ರೈತರ ಪರವಾಗಿ ಕಾಂಗ್ರಸ್ ನಿಂತಿದೆ. ರೈತ ವಿರೋಧಿ ಬಿಲ್ ತರಲು ನಾವು ವಿರೋಧ ಮಾಡಿದ್ದೆವೆ. ಈಗಲೂ ನಾವು ವಿರೋಧ ಮಾಡುತ್ತಲೇ ಇದ್ದೆವೆ. ಆದ್ರೆ ಈ ಕೇಂದ್ರ ಸರ್ಕಾರ ಮೊಂಡುತನದಿಂದ ವರ್ತನೆ ಮಾಡುತ್ತಿದ್ದೆ. ಇದಕ್ಕೆ ತಕ್ಕ ಉತ್ತರ ಕೊಡುವ ಕಾಲ ಬರಲಿದೆ ಎಂದಿದ್ದಾರೆ….

suddinow.com
suddinow.com