ಉಡುಪಿ – ಕಾಸರಗೋಡು ವಿಜಯ ಯಾತ್ರೆಯಲ್ಲಿ ಭಾಗವಹಿಸಲು ಬಂದಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರನ್ನು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಸಚಿವ ಕೋಟೆ ಪೂಜಾರಿ ಅವರು ಬೇಟಿ ಮಾಡಿದ್ದಾರೆ. ಸಮಾರಂಭಕ್ಕ ಆಗಮಿಸಲು ವಿಮಾನ ನಿಲ್ದಾಣಕ್ಕೆ ಬಂದಿಳಿದ ಯೋಗಿ ಅವರನ್ನು ಸಚಿವರು ಬೇಟಿ ಮಾಡಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ವೀಕ್ಷಣೆ ಬಂದ ರಾಜ್ಯದ ಪ್ರವಾಸಿಗರ ಅನುಕೂಲಕ್ಕೆ ಕರ್ನಾಟಕದ ಯಾತ್ರಿ ನಿವಾಸಗೆ ಜಮೀನಿ ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರವಾಗಿ ಯೋಗಿ ಅವರು ಆದಷ್ಟು ಬೇಗ ಸುಮಾರು 5 ಎಕರೆ ಜಮೀನನ್ನು ಕಾಯ್ದಿರಿಸಲಾಗುವುದು ಎಂದಿದ್ದಾರೆ. ಆದಷ್ಟು ಬೇಗ ಜಮೀನು ಮಂಜೂರು ಮಾಡಿಕೊಟ್ಟರೆ. ರಾಜ್ಯ ಸರ್ಕಾರ ನಿರ್ಮಾಣದ ಹೊಣೆಹೊತ್ತು ಕೂಡಲೆ ಯಾತ್ರಾ ನಿವಾಸ ಕಟ್ಟುವುದಾಗಿ ಸಚಿವರು ವಿವರಿಸಿದ್ದಾರೆ.