ಜಗಳ ಬಿಡಿಸಲು ಬಂದ ಪೊಲೀಸ್ ನನ್ನು ಬಿಡಲಿಲ್ಲ..!

0

ಗದಗ –  ಎರಡು ಗುಂಪುಗಳು ಮಧ್ಯೆ ನಡೆದ ಗಲಾಟೆಯಲ್ಲಿ 15 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರು ಘಟನೆ ಗದಗ ಜಿಲ್ಲೆಯ ಹಾತಲಗೇರಿಯಲ್ಲಿ ನಡೆದಿದೆ. ಈ ಗಲಾಟೆಗೆ ಹಳೆಯ ರಾಜಕೀಯ ವೈಷಮ್ಯವೇ ಕಾರಣ ಎಂದು ಹೇಳಲಾಗಿದೆ. ರಾಜಕೀಯ ಹಳೆ ವೈಷಮ್ಯದಿಂದ ೨ ಗುಂಪುಗಳ ಮಧ್ಯೆ ಕಲ್ಲುತೂರಾಟ ನಡೆದಿದ್ದು, ಪೊಲೀಸ್ ಪೇದೆ ಸೇರಿದಂತೆ ೧೫ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಗೋವಿಂದಪ್ಪ ಎಂಬಾತ ಬರ್ಹಿದೆಸೆಗೆ ತೆರಳುತ್ತಿದ್ದಾಗ ಗ್ರಾಮದ ಕೆಲವರು ಕಾಲು ಕರೆದುಕೊಂಡು ಜಗಳ ಮಾಡಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ‌ಇನ್ನು ಜಗಳ ಕಂಡ ಅವರ ಮಗ ಸಹ ಜಗಳ ಬಿಡಿಸಲು ಬಂದಾಗ ಅವರ ಮಗನನ್ನು ಹೊಡೆದಿದ್ದಾರೆ‌.

ಇದರಿಂದ ಕೆರಳಿದ ಹಲ್ಲೆಗೊಳಗಾದವರ ಗುಂಪು, ಹಲ್ಲೆ ಮಾಡಿದವರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ‌. ಈ ಮಧ್ಯ ಜಗಳ ಬಿಡಿಸಲು ಬಂದ ಪೊಲೀಸ್ ಪೇದೆಯನ್ನು ಸಹ ಗುಂಪಿನಲ್ಲಿ ಇದ್ದ ಜನರು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ  ಸುಮಾರು 15 ಕ್ಕೂ ಹೆಚ್ಚು ಜನರು ಗಾಯಗಳಾಗಿವೆ. ಈ ವೇಳೆ ಎರಡೂ ಗುಂಪುಗಳು ಪರಸ್ಪರ ಕಲ್ಲುತೂರಾಟ, ಕಟ್ಟಿಗೆಯಿಂದ ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಬಿಡಿಸಲು ಹೋದ ಓರ್ವ ಪೇದೆ ಸೇರಿದಂತೆ 15 ಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇದರಿಂದ ವಿಷಯ ತಿಳಿದ ಗದಗ ಗ್ರಾಮೀಣ ಠಾಣೆಯ ಇಬ್ಬರು ಪೊಲೀಸ್ ಗ್ರಾಮದಲ್ಲಿ ಬೀಡು ಬಿಟ್ಟಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply