ಪೊಲೀಸರ ವಾಹನವನ್ನೇ ಅಡ್ಡಗಟ್ಟಿ ಸಿಕ್ಕಿಬಿದ್ದರು

0

ಚಿಕ್ಕಮಗಳೂರು

ರಾತ್ರಿ ವೇಳೆ ಜನನಿಬಿಡ ಪ್ರದೇಶದಲ್ಲಿ ವಾಹನಗಳನ್ನ ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರು ಹೆದ್ದಾರಿ ದರೋಡೆಕೋರರನ್ನ ಜಿಲ್ಲೆಯ ಮೂಡಿಗೆರೆ ಪೊಲೀಸರು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡ್ಯ ಜಿಲ್ಲೆ ಬಿ.ಹೊಸುರು ಗ್ರಾಮದ ಶಿವಕುಮಾರ್, ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹುಲಿವಲ ಗ್ರಾಮದ ಕುಮಾರಸ್ವಾಮಿ, ಬೆಂಗಳೂರಿನ ಮರ್ಲೆ ಅಜಯ್ ಕುಮಾರ್ ಸಿಂಗ್ ಹಾಗೂ ಮೂಡಿಗೆರೆ ಪಟ್ಟಣದ ಆಜಾದ್ ನಗರ ನಿವಾಸಿ ಶಿವಕುಮಾರ್ ಬಂಧಿತ ದರೋಡೆಕೋರರು.

ಬಂಧಿತ ಆರೋಪಿಗಳಿಂದ 2 ರಿವಾಲ್ವರ್, 1 ಡ್ರ್ಯಾಗನ್, ಕಬ್ಬಿಣದ ರಾಡ್, ಖಾರದ ಪುಡಿ ಸಹಿತ ದರೋಡೆಗೆ ಬಳಸುತ್ತಿದ್ದ ಮಾರಕಾಸ್ತ್ರಗಳನ್ನ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ರಿವಾಲ್ವರ್ ಹಾಗೂ ಚಾಕುವಿನಂತಹಾ ಮಾರಕಾಸ್ತ್ರಗಳನ್ನು ತೋರಿಸಿ ರಾತ್ರಿ ವೇಳೆ ಸಂಚರಿಸುವ ವಾಹನಗಳನ್ನು ನಿರ್ಜನ ಪ್ರದೇಶದಲ್ಲಿ ತಡೆಗಟ್ಟಿ ಕೊಲೆ ಬೆದರಿಕೆ ಹಾಕಿ ಪ್ರಯಾಣಿಕರಿಂದ ಹಣ, ಚಿನ್ನಾಭರಣಗಳನ್ನ ಸುಲಿಗೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಶುಕ್ರವಾರ ರಾತ್ರಿ ಮೂಡಿಗೆರೆ ಪೋಲೀಸರು ಗಸ್ತು ತಿರುಗುವ ವೇಳೆ ಮೂಡಿಗೆರೆ ಪಟ್ಟಣ ಸಮೀಪದ ಕೃಷ್ಣಾಪುರ ಗ್ರಾಮದ ನಿರ್ಜನ ಪ್ರದೇಶದಲ್ಲಿ ರಸ್ತೆಯ ಹಂಪ್ಸ್ ಬಳಿ ಸುಲಿಗೆಗೆ ಹೊಂಚು ಹಾಕುತ್ತಿರುವ ಬಗ್ಗೆ ಪೋಲೀಸರಿಗೆ ದೂರವಾಣಿ ಮೂಲಕ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

ಈ ವೇಳೆ ಸ್ಥಳಕ್ಕೆ ಹೋಗುತ್ತಿದ್ದಂತೆ ದರೋಡೆಕೋರರು ಪೊಲೀಸರ ಜೀಪನ್ನೆ ಅಡ್ಡಗಟ್ಟಿ ಸುಲಿಗೆಗೆ ಮುಂದಾಗಿದ್ದಾರೆ. ಪೊಲೀಸರು ಜೀಪಿನಿಂದ ಕೆಳಗಿಳಿಯುತ್ತಿದ್ದಂತೆ ಪೊಲೀಸರೆಂದು ತಿಳಿದು ಓಡಲು ಮುಂದಾಗಿದ್ದಾರೆ. ದರೋಡೆಕೋರರನ್ನ ಬೆನ್ನತ್ತಿದ್ದ ಮೂಡಿಗೆರೆ ಪೊಲೀಸರು ಐವರಲ್ಲಿ ನಾಲ್ವರನ್ನ ಬಂಧಿಸಿ ರಿವಾಲ್ವರ್ ಹಾಗೂ ಮಾರಕಾಸ್ತ್ರಗಳನ್ನ ವಶಪಡಿಸಿಕೊಂಡಿದ್ದಾರೆ. ಬಂಧಿತರ ವಿರುದ್ಧ ಮೂಡಿಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹೆದ್ದಾರಿ ದರೋಡೆಕೋರರನ್ನ ಬಂಧಿಸುವ ಕಾರ್ಯಚರಣೆಯಲ್ಲಿ ಸರ್ಕಲ್ ಇನ್ಸ್ ಸೋಮಶೇಖರ್, ಸಬ್ ಇನ್ಸ್‍ಪೆಕ್ಟರ್ ರವಿ ಹಾಗೂ ಸಿಬ್ಬಂದಿಗಳಾದ ಗಿರೀಶ್, ದಯಾನಂದ್, ಲೋಹಿತ್, ಚೇತನ್ ಸೇರಿದಂತೆ ವಿವಿಧ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply