ವೈದ್ಯರು ಪತ್ರಕರ್ತರ ನಿಸ್ವಾರ್ಥ ಸೇವೆ ಅನನ್ಯ

0

ಬಳ್ಳಾರಿ ಜಿಲ್ಲೆ ಕೊಟ್ಟೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರು ಹಾಗೂ ಜನರ ಆರೋಗ್ಯ ಕಾಪಾಡುವ ವೈದ್ಯರ ನಿಸ್ವಾರ್ಥ ಸೇವೆ ಅನನ್ಯವಾದದ್ದು ಎಂದು ಉಜ್ಜಿನಿ ಸದ್ಧರ್ಮ ಹಿರಿಯನಾಗರಿಕ ಕಾಲಾಕ್ಷೇಪನಾ ಸಂಘದ ಅಧ್ಯಕ್ಷ ಚನ್ನವೀರ ಸ್ವಾಮಿ ಹೇಳಿದರು.

ತಾಲೂಕಿನ ಉಜ್ಜಿನಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ವೈದ್ಯರ ದಿನಾಚರಣೆ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ವೈದ್ಯರಿಗೆ ಮತ್ತು ಸಿಬ್ಬಂದಿವರ್ಗಕ್ಕೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೊರೋನಾ ಮಹಾಮಾರಿ ವೈರಸ್ ನಮ್ಮ ದೇಶದ ಪ್ರಜೆಗಳನ್ನು ನಿದ್ದೆ ಹಿಡಿಸುವಂತೆ ಕಾಡಿತ್ತು ವೈದ್ಯರು ನರ್ಸ್ ಗಳು ಆಂಬುಲೆನ್ಸ್ ಡ್ರೈವರ್ ಗಳು ಹಗಲು-ರಾತ್ರಿಯೆನ್ನದೆ ನಿರಂತರ ಸೇವೆಯಿಂದ ಅದೆಷ್ಟೋ ಜನರ ಪ್ರಾಣವನ್ನು ಉಳಿಸಿದ್ದಾರೆ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರ ಮತ್ತು ಜನರಲ್ಲಿ ಜಾಗೃತಿ ಮೂಡಿಸಿ ದಂತಹ ನಿಸ್ವಾರ್ಥ ಸೇವೆ ಎಂದರೆ ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮ ವರ್ಗ ಪತ್ರಕರ್ತರದ್ದು ಎಂದು ಶ್ಲಾಘಿಸಿದರು. ಉಜ್ಜಿನಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯರಾದ ಡಾ.ಅವಿನಾಶ್, ಡಾ.ತ್ಯಾಗರಾಜ್,ಡಾ. ರವಿತೇಜ ಇವರುಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರುದ್ರಗೌಡ, ಮರುಳಾರಾಧ್ಯ, ಬಸವನಗೌಡ, ಗ್ರಾ.ಪಂ. ಸದಸ್ಯ ನಾಗೇಂದ್ರಪ್ಪ, ಶಿರಸಚಾರಿ, ಆರೋಗ್ಯ ಸಿಬ್ಬಂದಿಗಳಾದ ಸಿದ್ದೇಶ್, ಹೊನ್ನಮ್ಮ ಆಕಾಶ,ನಟರಾಜ್, ನಿಂಗರಾಜ್,ಕರಿಯಪ್ಪ ಮುಂತಾದವರು ಇದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

IMG_20210701_133003.jpg

Email

Huligesha tegginakeri

About Author

Huligesha Tegginakeri

Leave A Reply