ಜೊತೆ ಜೊತೆಯಲ್ಲಿ ಸಿರಿಯಲ್ ನಾಯಕಿ ಸಿರಿಯಲ್ ನಿಂದ ಔಟ್…!?

0

ಬೆಂಗಳೂರು  – ಇತ್ತೀಚಿನ ದಿನಗಳಲ್ಲಿ ಭಾರಿ ಸದ್ದು ಮಾಡಿ ಕನ್ನಡಿಗರ ಮನೆಮಾತಾಗಿದ್ದ ಜೊತೆ ಜೊತೆಯಲಿ ಸಿರಿಯಲ್ ನಾಯಕಿ ಮೇಘನಾ ಶೆಟ್ಟಿ ಇನ್ನುಮುಂದೆ ಸಿರಿಯಲ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದರಿಂದ ಬಹುತೇಕ ಅವರ ಅಭಿಮಾನಿಗಳಿಗೆ ಇದೊಂದು ಆಘಾತಕಾರಿ  ಸುದ್ದಿ. ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕನ್ನಡದ ಮನೆಮಾತಾಗಿದ್ದ ಮೇಘನಾ ಶೆಟ್ಟಿ ಸೀರಿಯಲ್ ಇಂದ ಹೊರ ಬಂದಿದ್ದಾರಂತೆ.

ಅಷ್ಟಕ್ಕೂ ಅವರು ಸೀರಿಯಲ್ ನಿಂದ  ಹೊರನಡೆಯಲು ಕಾರಣ ಏನೆಂಬುದು ಇದುವರೆಗೂ ತಿಳಿದುಬಂದಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ ಮೇಘನಾ ಶೆಟ್ಟಿ ಸೀರಿಯಲ್ ನಿಂದ ಹೊರ ನಡೆದದ್ದು ಮಾತ್ರ ಪಕ್ಕ.  ಇನ್ನು  ಕೇವಲ ಎರಡು ದಿನಗಳ ಹಿಂದೆಯಷ್ಟೇ ತಮ್ಮ ಕೊನೆಯ ಶೂಟಿಂಗನ್ನು ಮುಗಿಸಿದ್ದಾರೆ. ಮುಂದಿ ಈ ಧಾರಾವಾಹಿಯಲ್ಲಿ ಯಾರು ಬರುತ್ತಾರೆ ಎಂಬುದು ಭಾರಿ ಕುತೂಹಲ ಮೂಡಿಸೆದೆ.

ಬಹುಶಹ ಮೇಘನಾ ಶೆಟ್ಟಿ ಅವರಿಗೆ ಕನ್ನಡ ಮತ್ತು ತೆಲುಗು ಚಿತ್ರಗಳಿಂದ ಆಫರ್ ಬಂದಿದೆ ಎನ್ನುವ ಗಾಳಿಸುದ್ದಿ ಹರಿದಾಡುತ್ತಿದೆ. ಇದೇ ಕಾರಣಕ್ಕೆ ಮೇಘನಾ ಶೆಟ್ಟಿ ಜೊತೆ ಜೊತೆಯಲಿ ಸೀರಿಯಲ್ ಇಂದ ಹೊರಬಂದಿರುವ ಸಾಧ್ಯತೆ ಹೆಚ್ಚಿದೆ. ಧಾರಾವಾಹಿಯ ನಾಯಕ ಅನಿರುದ್ದ ಅವರಿಗೆ  ನಾಯಕಿಯಾಗಿ  ಯಾರು ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply