ಆಡಳಿತ ಪಕ್ಷದ ಗೊಂದಲದಿಂದ ರಾಜ್ಯ ಅಭಿವೃದ್ದಿಯಾಗುತ್ತಿಲ್ಲಾ, ಎನ್.ಎಸ್. ಬೋಸರಾಜ್.

0

ರಾಯಚೂರು

ಆಡಳಿತ ಪಕ್ಷದಲ್ಲಿ ಗೊಂದಲಗಳಿಂದ ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ಆಗಿಲ್ಲವೆಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ಹೇಳಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 50 ವರ್ಷಗಳ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಗೊಂದಲದ ಸರ್ಕಾರ ನಾನು ಕಂಡಿಲ್ಲ. ಆಡಳಿತ ನಡೆಸುವ ಸರ್ಕಾರ ಸ್ಥಿರವಾದ ಸರ್ಕಾರವಿರಬೇಕು.

ಆದ್ರೆ ಈ ತರಹ ಗೊಂದಲಗಳು ಬೆಳವಣಿಗೆ ಆಗಬಾರದು, ಇಂತಹ ಗೊಂದಲ ನಿರ್ಮಾಣವಾದರೆ ಅಭಿವೃದ್ದಿ ಕೆಲಸ ಹೊಡೆತ ಬೀಳುತ್ತಿದೆ. ಆದ್ರೆ ಅದೇ ಪಕ್ಷದ ಅಧ್ಯಕ್ಷರು ಹೇಳಿರುವ ಆಡಿಯೋ ಬಂದಿರುವುದು ಗೊಂದಲ ಸೃಷ್ಠಿಯಾಗಿದ್ದು, ಬಹಳ ದಿನಗಳ ಈ ಸರ್ಕಾರ ನಡೆಯುವುದಿಲ್ಲ. ಆಡಳಿತದಲ್ಲಿರುವ ಪಕ್ಷದಲ್ಲಿ ಗೊಂದಲಗಳಿಂದ ರಾಜ್ಯದ ಅಭಿವೃದ್ದಿ ಕೆಲಸಗಳಾಗಿಲ್ಲ ಎಂದು ದೂರಿದ್ರು. ಕೊರೊನಾ ವೈರಾಸ್ ಆವರಿಸಿದಾಗ ಸರ್ಕಾರ ಸಮರ್ಪಕವಾಗಿ ನಿಭಾಯಿಸುವುಲ್ಲಿ ವಿಫಲವಾಗಿದ್ದು, ಸುಳ್ಳು ಅಂಕಿ ಸಂಖ್ಯೆಗಳನ್ನ ನೀಡಿದೆ. ಬಿಜೆಪಿ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದರು.

 

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply