ಬಾಗಲಕೋಟೆಕಡು ಬಡತನದಲ್ಲಿ ಬೆಳದ ಯುವಕ ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಯುವ ಪ್ರತಿಭೆ ನಿನ್ನೆಯಿಂದ ಆರಂಭವಾದ ಕನ್ನಡದ  ಝೀ ವಾಹಿನಿ ಡಿಕೆಡಿ ಶೆಟ್ ನಲ್ಲಿ ದೂಳೆಬ್ಬಿಸಿದ್ದಾನೆ.  ಕರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದ  ಕಾರಣ ಕನ್ನಡದ ರಿಯಾಲಿಟಿ ಶೋಗಳಿಗೆ ಒಂದು ರೀತಿಯಲ್ಲಿ ಮಂಕು ಕವಿದಿತ್ತು. ಸದ್ಯ ಕರೋನಾ ಹತೋಟಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಕರೋನಾ ನಿಯಮಗಳನ್ನು ಸಡಿಲಿಕೆ ಮಾಡಿದೆ. ಹೀಗಾಗಿ ಕನ್ನಡದ ಬಹುತೇಕ ರಿಯಾಲಿಟಿ ಶೋಗಳು ಮತ್ತೆ ಆರಂಭವಾಗಿದ್ದು. ಹೊಸ ಹುಮ್ಮಸ್ಸಿನಿಂದ ಶೋ ಗಳನ್ನು ಕನ್ನಡ ಝೀ ಮಾಹಿನಿ ಪ್ರಸಾರ ಮಾಡಲು ಮುಂದಾಗಿದೆ.

ಝೀ ವಾಹಿನಿ ಅದರಲ್ಲೂ ಅದ್ದೂರಿಯಾಗಿ ಕಾರ್ಯಕ್ರಮ ಮಾಡುವುದರಲ್ಲಿ ಹೆಸರುವಾಸಿಯಾಗಿದೆ. ಲಾಕ್ ಡೌನ್ ಬಳಿಕ ಮತ್ತೆ ಆರಂಭವಾದ ಬಹು ನಿರೀಕ್ಷಿತ ಕನ್ನಡದ ಡ್ಯಾನ್ಸಿಂಗ್  ಕಾರ್ಯಕ್ರಮ ಕನ್ನಡದ ಡಿಕೆಡಿ ಶೋ ನಿನ್ನೆ ಇಂದ ಆರಂಭವಾಗಿದೆ. ಕಳೆದ 2-3 ತಿಂಗಳಿಂದ ರಾಜ್ಯದ ನಾನಾ ಭಾಗದಲ್ಲಿ ಝೀ ವಾಹಿನಿಯ ತಂಡ ಡ್ಯಾನ್ಸ್ ಪ್ರತಿಭೆಯನ್ನು ಹೆಕ್ಕಿ ತಗೆದಿದೆ. ಅದರಲ್ಲಿ ನಿನ್ನೆ ಆರಂಭವಾದ ಕಾರ್ಯಕ್ರಮದಲ್ಲಿ ಓಪನಿಂಗ್ ಬ್ಯಾಟ್ಸ್‌ಮನ್ ಆಗಿ ಬಂದ ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ವಿಜಯ್ ಸಿಂಗಶೆಟ್ಟಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಕಡು ಬಡತನದಲ್ಲಿ ಬೆಳದ ವಿಜಯ್ ಬಿಬಿಎ ಪದವಿದರ. ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಲೇ ಡ್ಯಾನ್ಸ್ ಕಲಿತು ಇಂದು ಡಿಕೆಡಿ ಶೆಟ್ ನಲ್ಲಿ ತೀರ್ಪುಗಾರರು ಬೆರಗಾಗುವಂತೆ  ಡ್ಯಾನ್ಸ್  ಮಾಡಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ವಿಜಯ್ ಅವರ ತಂದೆ ತಾಯಿಗಳು ನೇಕಾರಿಕೆಯನ್ನು ನೆಚ್ಚಿಕೊಂಡ ಬದುಕು ಸಾಗಿಸುವ ಬಡ ಕುಟುಂಬ‌. ಮಗನಿಗೆ ಡ್ಯಾನ್ಸ್ ಕಲಿಸಬೇಕೋ ಕಾಲೇಜು ಕಲಿಸಬೇಕು ಎನ್ನುವ ಗೊಂದಲದಲ್ಲಿ ಇದ್ದ ಅವರಿಗೆ, ಮಗನೇ ತನ್ನ ಭವಿಷ್ಯವನ್ನು ಡ್ಯಾನ್ಸ್ ಮೂಲಕವೇ ಕಂಡುಕೊಳ್ಳಲು ಹೆಜ್ಜೆ ಹಾಕಿದ್ದಾನೆ.

About Author

Priya Bot

Leave A Reply