ಲಸಿಕೆ ತೆಗೆದುಕೊಂಡ್ರೆ ಪುರುಷತ್ವ್  ಹೋಗುತ್ತೆ, ನಮಗೆನ ಲಸಿಕೆ ಬೇಡ ಎಂದ ಗ್ರಾಮಸ್ಥರು

0

ಬಳ್ಳಾರಿ – ಗಣಿ ನಾಡು ಬಳ್ಳಾರಿ‌ ಜಿಲ್ಲೆಯಲ್ಲಿ ಕರೋನಾ ಸೋಂಕು ಇಳಿಕೆ ಕಂಡಿದೆ. ಆದ್ರೆ. ಈ ಮಧ್ಯ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ 18 ವರ್ಷ ಮೇಲ್ಪಟ್ಟ ಎಲ್ಲಿರಿಗೂ ಲಸಿಕೆ ಕೊಡಲೇ ಬೇಕು ಎನ್ನುವ ಯೋಜನೆಯನ್ನು ಜಿಲ್ಲಾಡಳಿತ ರೂಪಿಸಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳುವಂತೆ ಜನರಲ್ಲಿ ಮನವಿ ಮಾಡುತಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗೂಡೆಕೋಟೆ ಗ್ರಾಮದಲ್ಲಿ ಕೆಲ  ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತಿದ್ದಾರೆ. ಲಸಿಕೆ ತೆಗೆದುಕೊಂಡರೇ ಕೈ ಕಾಲುಗೂ ಬಿದ್ದು ಹೋಗುತ್ತವೆ, ಲಸಿಕೆ ತೆಗೆದುಕೊಂಡ್ರೆ ಪುರುಷತ್ವ ಹೋಗುತ್ತೆ, ಹೀಗಾಗಿ ನಾವು ಯಾರೂ ಲಸಿಕೆ ಹಾಕಿಸಿಕೊಳ್ಳಾಲ್ಲಾ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ನಾವು ಯಾರೂ ಲಸಿಕೆ ಪಡೆಯಲ್ಲಾ, ನಾವ್ ಆರಾಮ್ ಇದ್ದೀವಿ ನಮಗ್ಯಾಕಬೇಕು ವ್ಯಾಕ್ಸಿನ್ ಎಂದು ಹಠ ಮಾಡುತ್ತಿದ್ದಾರೆ.

ಅಧಿಕಾರಿಗಳ ಮನೆ ಮನೆಗೆ ತೆರಳಿ ವ್ಯಾಕ್ಸಿನ್ ಹಾಕಿಕೊಳ್ಳಿ ಅಂದ್ರು ಜನರು ಮಾತ್ರ ಲಸಿಕೆ ಪಡೆಯುತ್ತಿಲ್ಲಾ. ಪಿಡಿಒ, ಆರೋಗ್ಯಾಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರೆ ಮನಗೆ ತೆರಳಿ ಬನ್ನಿ ಅಂತಾ ಕರೆದ್ರೂ ಜನ ಮಾತ್ರ ಲಸಿಕೆ ಹಾಕಿಸಿಕೊಳ್ಳುತ್ತಿಲ್ಲಾ. ಇನ್ನು ಗ್ರಾಮದಲ್ಲಿ ಬಹುತೇಕ ಜನರು ಲಸಿಕೆ ಪಡೆದಿದ್ದಾರೆ. ಆದ್ರೆ ಹಿರಿಯ ನಾಗರಿಕರು, ಅನಕ್ಷರಸ್ಥರು ಲಸಿಕೆ ಪಡೆಯಲು ಹಿಂದೇಟು ಹಾಕಿ, ನಾನಾ ಕಾರಣಗಳನ್ನು ನೀಡಿ ಅಧಿಕಾರಿಗಳನ್ನು ವಾಪಸ್ ಕಳಿಸುತಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply