ಬಟ್ಟೆ ಒಗೆಯಲು ಹೋದ ಮಹಿಳೆ ಮರಳಿ ಬರಲೇ ಇಲ್ಲಾ

0

ಕಲಬುರಗಿ

ರಾಜ್ಯಾದ್ಯಂತ ಉತ್ತಮ ಮಳೆಯಾಗುತಿದ್ದು, ಬಹುತೇಕ ನದಿಗಳು ಹಳ್ಳ ಕೊಳ್ಳಗಳು ಉಕ್ಕಿಹರಿಯುತ್ತಿವೆ. ಇತ್ತ ಕಲಬುರಗಿ ಜಿಲ್ಲೆಯಲ್ಲಿ ಸಹ ಉತ್ತಮ ಮಳೆಯಾಗುತ್ತಿದ್ದು, ಹಳ್ಳಕ್ಕೆ ಬಟ್ಟೆ ತೊಳೆಯಲು ಹೋದ ಮಹಿಳೆ ನೀರಲ್ಲಿ ಮುಳಿಗಿರು ಘಟನೆ ನಡೆದಿದೆ.‌ ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ‌ ಈ ಹಿನ್ನೆಲೆಯಲ್ಲಿ  ಜಲಾಶಯಗಳು ತುಂಬಿದ್ದರಿಂದ ಬೆಣ್ಣೆತೋರಾ ಜಲಾಶಯದಿಂದ ಬಿಟ್ಟ ಹಿನ್ನಿರಿನಲ್ಲಿ ಮುಳುಗಿ ಮಹಿಳೆಯೋರ್ವಳು ಸಾವನ್ನಪ್ಪಿದ ಘಟನೆ ಮಳಖೇಡ ಬಳಿಯ ಸಂಗಾವಿಯಲ್ಲಿ  ಸಂಭವಿಸಿದೆ.

ಮಾಣಿಕಮ್ಮ  (28) ಎಂಬ ಮಹಿಳೆ ಬಟ್ಟೆ ತೊಳೆಯಲು ಹೋದಾಗ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ, ಬಟ್ಟೆ ಸಮೇತವಾಗಿ, ನೀರು ಪಾಲಾಗಿದ್ದು, ಮಹಿಳೆಯ ಶವಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಶವ ಸಿಗದ ಹಿನ್ನೆಲೆಯಲ್ಲಿ ಎನ್.ಡಿ.ಆರ್.ಎಫ್. ಪೋಲಿಸ ತಂಡ ಮತ್ತು ಸ್ಥಳೀಯ ಮೀನುಗಾರರ ತೀವ್ರ ಹುಡುಕಾಟ ನಡೆಸಿದರೂ ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ತಹಸಿಲ್ದಾರ, ಮಳಖೇಡ ಠಾಣೆಯ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಈ ಬಗ್ಗೆ ಮಳಖೇಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply