ಕಲಬುರಗಿ- ಕರ್ನಾಟಕದಲ್ಲಿ ಮುಖ್ಯಮಂತ್ರಿ ಹಾಗೂ ಅವರ ಕುಟುಂಬ ಭ್ರಷ್ಟಾಚಾರ ಮಾಡುತ್ತಿದೆ‌ ಎಂದು ಬಸನಗೌಡ್ ಯತ್ನಾಳ್  ಅವರು ಸಿ ಎಮ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಲಬುರಗಿ ನಗರದಲ್ಲಿ ಮಾತನಾಡಿದ ಅವರು ಸಿ ಎಮ್ ಅವರ ಕುಟುಂಬ ಭ್ರಷ್ಟಾಚಾರ ಮಾಡುತ್ತಿದೆ‌. ಈಗ ನಾ ಒಬ್ಬನೇ ಮಾತನಾಡುತ್ತಿರುವೆ. ಯಡಿಯೂರಪ್ಪರ ವಿರುದ್ದಇನ್ನು ಬಾಳ ಮಂದಿ ಮಾತಡ್ತಾರೆ.

ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಸ್ಪೋಟ ಆಗುತ್ತದೆ ಎಂದಿದ್ದಾರೆ. ಇನ್ನು ಪ್ರಧಾನಿ ಮೋದಿ ನಾನು ತಿನ್ನಲ್ಲಾ, ತಿನ್ನಲು ಬಿಡೋದಿಲ್ಲಾ ಅಂತಾರೆ, ಆದ್ರೆ ಕರ್ನಾಟಕದಲ್ಲಿ ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರ ಮಾಡುತ್ತಿದೆ, ಕಲ್ಯಾಣ ಕರ್ನಾಟಕ ದಲ್ಲಿ  ಯಡಿಯೂರಪ್ಪ ಬೀಗರು ಟ್ರಾನ್ಸಪರ್ ಮಾಡಿಸ್ತಿದ್ದಾರೆ, ವಿಜಯೇಂದ್ರ ರಾಜ್ಯದ ತುಂಬಾ ವರ್ಗಾವಣೆ ಮಾಡಿಸ್ತಿದ್ದಾನೆ. ಯಡಿಯೂರಪ್ಪ ಗೆ ವಯಸ್ಸಾಗಿದೆ, ಅವರು ರಬ್ಬರ್ ಸ್ಟ್ಯಾಂಪ್, ಮಂತ್ರಿಗಳಿಗೆ ಇಂದು ಸ್ವಾತಂತ್ರವಿಲ್ಲದಂತ ಸ್ಥಿತಿ ನಿರ್ಮಾಣವಾಗಿದೆ.

ನಾವು ಪಾರ್ಟಿ ಕಟ್ಟಿದಾಗ ವಿಜಯೇಂದ್ರ ಶಾಲೆ ಕಲಿತಿದ್ದ, ವಿಜಯೇಂದ್ರನೇ ಎಲ್ಲಾ ಆದ್ರೆ ಸಿಎಂ ಯಾಕೆ ಬೇಕು, ಸಿಎಂ ರಾಜೀನಾಮೆ ನೀಡಬೇಕು, ಬಿಜೆಪಿ ಯ ಯಾವ ಶಾಸಕರು ಸಮಾಧಾನವಿಲ್ಲಾ, ಸ್ವತ ಶಿವಮೊಗ್ಗದ ಯಾವ ಶಾಸಕರು ಸಮಾಧಾನವಿಲ್ಲಾ.ಕೆಲವರು ಯಡಿಯೂರಪ್ಪ ರನ್ನು ಖುಷಿ ಪಡಿಸಲು ಕೆಲ ಹೇಳಿಕೆ ನೀಡ್ತಾಯಿದ್ದಾರೆ. ಯಡಿಯೂರಪ್ಪ ರನ್ನು ತಗೆಯಲು ಮುಂದಾದ್ರೆ ಅವರ ಬೆನ್ನಿಗೆ ಯಾವ ಶಾಸಕರು  ನಿಲ್ಲೋದಿಲ್ಲಾ, ಯಡಿಯೂರಪ್ಪ ಇದ್ರು ಬಿಜೆಪಿ ನೂರಾ ನಾಲ್ಕು ದಾಟಿಲ್ಲಾ, ಅವರನ್ನು ಬಿಟ್ರೆ ಪಕ್ಷ ನೂರಾ ಐವತ್ತು ದಾಟುತ್ತದೆ. ಆಗ ಉತ್ತರ ಕರ್ನಾಟಕ ದವರೇ ಮುಖ್ಯಮಂತ್ರಿ ಆಗುತ್ತಾರೆ. ರಾಜ್ಯದಲ್ಲಿ ಮೇ ಎರಡರ ನಂತರ ಬದಲಾವಣೆಯಾಗುತ್ತದೆ

ಕೊಳಕು ರಾಜಕಾರಣ ಬಿಟ್ಟು ಯಡಿಯೂರಪ್ಪ ಗೌರವಯುತವಾಗಿ ನಿರ್ಗಮಿಸಬೇಕು. ಯಡಿಯೂರಪ್ಪ ನವರಿಗೆ ಬೋನಸ್ ಅಂತ ವಯಸ್ಸು ಆದ್ರು ಅವಕಾಶ ನೀಡಿದ್ರು. ಆದ್ರೆ ಬರಿ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply