ಧರ್ಮೋ ರಕ್ಷತಿ ರಕ್ಷತಃ

0

ಡಾ. ಈಶ್ವರಾನಂದ ಸ್ವಾಮೀಜಿ

ಒಬ್ಬ ಸಂತ ಹಿಮಾಲಯದಲ್ಲಿ ಮಾರ್ಗದರ್ಶಕನ ಜೊತೆಯ ತಿರುಗಾಡುತಿದ್ದ. ಅಲ್ಲಿ ರಕ್ತ ಹೆಪ್ಪು ಗಟ್ಟುವಷ್ಟು ಚಳಿ. ಸಂಜೆಯ ಸಮಯವಾಗುತ್ತ ಬಂತು. ಮರಳಿ ಅವರ ತಂಗಿದ ಸ್ಥಳಕ್ಕೆ ಬರಲು ಸ್ವಲ್ಪ ದೂರವಿತ್ತು. ಅವರು ಬರುವ ದಾರಿಯಲ್ಲಿ ಒಬ್ಬ ಚಳಿಯಿಂದ ನಡುಗಿ ಪ್ರಜ್ಞಾಹೀನನಂತೆ ಬಿದ್ದದ್ದು ಕಂಡು ಸಂತ ಹತ್ತಿರ ಹೋಗಿ ನೋಡಿದ ಅವನಿಗೆ ಸಹಾಯ ಮಾಡಲು ಮುಂದಾದನು ಅದಕ್ಕೆ ಮಾರ್ಗದರ್ಶಕನ ಸಹಾಯ ಕೇಳಿದರು ಅವನು ಒಪ್ಪದೆ ತನ್ನ ಪ್ರಯಣ ಮುಂದೆವರೆಸಿದನು. ಈ ಸಂತ ಅಲ್ಲಿ ಬಿದ್ದುರುವ ವ್ಯಕ್ತಿಯ ಕೈ ಕಾಲುಗಳು ಉಜ್ಜಿ ಶಾಖವನ್ನು ಮಾಡಿದನು ಸ್ವಲ್ಪ ಉಸಿರಾಡತೋಡಗಿನು.

ಅದರಿಂದ ಸಂತ ಅವನನ್ನು ಹೆಗಲ ಮೇಲೆ ಹೊತ್ತು ನಡೆಯತೋಡಗಿದನು. ಶಾಖ ಹೆಚ್ಚಾಗಿ ಆ ವ್ಯಕ್ತಿಗೆ ಪೂರ್ಣ ಪ್ರಜ್ಞಾಬಂತು. ಇಬ್ಬರು ಮತ್ತು ನಡಿತಾ ಸ್ವಲ್ಪ ಮುಂದೆ ಹೋಗಿರಬಹುದು ಅಲ್ಲಿ ಹೆಣ ಬಿದ್ದಿತ್ತು. ನೋಡಿದರು ಉಸಿರು ನಿಂತು ಹೋಗಿದೆ. ಅವನು ಮತ್ತಾರು ಅಲ್ಲ. ಸಂತನಿಗೆ ದಾರಿ ತೋರಿಸಿದ ಮಾರ್ಗದರ್ಶಿ ದಾರಿಯಲ್ಲಿ ಬಿಟ್ಟು ಬಂದು ಇಲ್ಲಿ ಚಳಿಯಿಂದ ಹೆಣವಾಗಿ ಬಿದ್ದಿದನು. ಸಂತನ ಜೊತೆಗಿದ್ದರೆ, ಅಥವಾ ಅಲ್ಲಿ ಬಿದ್ದಿರುವ ವ್ಯಕ್ತಿಗೆ ಸಹಾಯ ಮಾಡಿದರೆ ಬದುಕುತಿದ್ದೇನೋ? ಆದರೆ ಅವನ ಹಣೆಬರಹದಲ್ಲಿ ಇಲ್ಲ. ಆದ್ದರಿಂದ ಮುಂದೆ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ಸಂಕಟದಲ್ಲಿರುವವರಿಗೆ ಮೊದಲು ಸಹಾಯ ಮಾಡಬೇಕು. ಅದರಿಂದ ನಮಗೆ ಬರುವ ಕಂಟಕ ದೂರಾಗಲು ಸಾಧ್ಯವಿರಬಹುದು. ಆದುದರಿಂದ ಧರ್ಮೋ ರಕ್ಷತಿ ರಕ್ಷತಃ ಎಂಬ ಮಾತು ಸತ್ಯವಾದುದು.

ಅದಕ್ಕೆಂತಲೇ ಬಸವಣ್ಣನವರು “ದಯವಿಲ್ಲದ ಧರ್ಮವದೇವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ, ದಯವೇ ಧರ್ಮದ ಮೂಲವಯ್ಯಾ” ಎಂದಿದ್ದಾರೆ. “ಅಹಿಂಸಃ ಪರಮೋ ಧರ್ಮ” ಇಂತಹ ಹಲವಾರು ಉದಾಹರಣೆಗಳನ್ನು ಕೊಡಬಹುದು. ಇದಕ್ಕೊಂದು ಇನ್ನೊಂದು ಉದಾಹರಣೆ ನೋಡುವಾ.
ಒಂದೂರಲ್ಲಿ ರೈತಪ್ಪ ಮತ್ತು ರೈತಮ್ಮ ಇಬ್ಬರು ಗಂಡ ಹೆಂಡತಿ ಅನುಕೂಲಸ್ಥ ಕುಟುಂಬ. ಅವರ ಮನೆಯಲ್ಲಿ ಒಂದು ಇಲಿ, ಒಂದು ಕೋಳಿ, ಒಂದು ಹಂದಿ ಮತ್ತು ಒಂದು ಆಡು ಇದ್ದವು. ರೈತಮ್ಮಳಿಗೆ ಇಲಿಯ ಕಾಟ ಜಾಸ್ತಿಯಾಯಿತು. ಅದಕ್ಕೆ ಕೊಲ್ಲಲು ವಿಷ ತಂದಳು ಇಲಿಗೆ ಗೊತ್ತಾಗಿ ಇಲಿ ತನ್ನ ಸ್ನೇಹಿತರಾದ ಕೋಳಿ, ಹಂದಿ ಮತ್ತು ಆಡಿಗೆ, ನನ್ನನ್ನು ಕೊಲ್ಲಲು ಪಾಷಾಣ ತಂದಿದ್ದಾರೆ. ಎಂದು ಹೇಳಿತು ಆದರೆ ಅವು ಯಾವದೇ ಸಹಾಯ ಮತ್ತು ಸಾಂತ್ವನ ಹೇಳಲಿಲ್ಲ.

ಅದಕ್ಕೆ ಕೋಳಿ ನಾನುಂಟು ನನ್ನ ತಿಪ್ಪೆಯ ಗುಂಡಿಯ ಕಾಳುಂಟು, ನಾನು ಸುಖವಾಗಿದ್ದೇನೆ, ನಿನ್ನ ಗೊಳಿಗೆ ನಾನೇಕೆ ಅಳಲಿ? ಎಂದಿತು. ಹಂದಿ ನಾನುಂಟು ನನ್ನ ಕೆಸರಿನ ಗುಂಡಿ ಉಂಟು. ನಾನು ಆನಂದವಾಗಿದ್ದೇನೆ. ನನಗೆ ಪಾಷಾಣದಿಂದ ಯಾವ ಹೆದರಿಕೆ ಇಲ್ಲ. ನಿನ್ನ ಕಷ್ಟ ನಿನಗೆ ಎಂದಿತು. ನಂತರ ಆಡು ನಾನು ತಿನ್ನುವಷ್ಟು ಸೊಪ್ಪು ಇದೆ. ಬೆಚ್ಚನೆಯ ದೊಡ್ಡಿಯಿದೆ. ನಿನ್ನ ಪಾಡು ನಿನಗೆ, ನನ್ನ ಪಾಡು ನನಗೆ ಎಂದಿತು. ಇದರಿಂದ ತುಂಬಾದಿಂದ ದುಃಖದಿಂದ ತನ್ನ ಬಿಲ ಸೇರಿತು.
ಅಂದು ಸಂಜೆ ಪಾಷಾಣ ಸಿದ್ಧಗೊಳಿಸಿದ ರೈತಮ್ಮ ಕೈ ಸರಿಯಾಗಿ ತೊಳೆಯದೆ ಊಟ ಮಡಿದಳು ಅದರ ಜೊತೆಗೆ ಪಾಷಾಣ ಹೊಟ್ಟೆಗೆ ಸೇರಿ ಹೊಟ್ಟೆ ತೊಳಸಿದಂತಾಗಿ ವಾಂತಿ ಶುರುವಾಯಿತು.

ತಕ್ಷಣ ರೈತಪ್ಪ ವೈದ್ಯರನ್ನು ಕರೆಸಿದ. ವೈದ್ಯರು ಚಿಕಿತ್ಸೆ ನೀಡಿದರು. ಕತ್ತಲಾದುದರಿಂದ ರೈತ ವೈದ್ಯರಿಗೆ ಊಟ ಮಾಡಿಕೊಂಡು ಹೋಗಲು ಒತ್ತಾಯ ಮಾಡಿದ ಅವರ ಊಟಕ್ಕಾಗಿ ಅವರ ಮನೆಯಲ್ಲಿದ್ದ ಕೋಳಿ ಕತ್ತರಿಸಿ ಪಲಾವ ಮಾಡಿ ಬಡಿಸಿದ. ಬೆಳಿಗೆ ಈ ಸುದ್ಧಿ ಊರಿನ ತುಂಬೆಲ್ಲ ರೈತಮ್ಮ ಪಾಷಾಣ ತಿಂದಾಳಂತೆ ಏನು ಕಷ್ಟವಿತ್ತೋ ಏನೋ ಎಂಬ ಗಾಳಿ ಮಾತು ಹರಡಿತು. ರೈತಮ್ಮಳಿಗೆ ಸಾಂತ್ವನ ಮಾಡಲು ಊರಿನ ಜನರೆಲ್ಲ ಬಂದರು ಮದ್ಯಾಹ್ನಾದ ಊಟದ ಸಮಯವರೆಗೂ ಅಲ್ಲಿಯೇ ಉಳಿದರು ಅವರಿಗಾಗಿ ಮದ್ಯಾಹ್ನಕ್ಕೆ ಹಂದಿ ಕತ್ತರಿಸಿ ಅಡುಗೆ ಮಾಡಿ ಬಡಿಸಿದರು. ನಂತರ ಈ ಸುದ್ಧಿ ಅವರ ದೂರಿನ ಸಂಬಂಧಕರಿಗೂ ತಿಳಿದು ಅವರು ಮಾತನಾಡಿಸಲು ಬಂದರು ಅವರಿಗೆ ಹಾಗೆ ಖಳಿಸಲು ಸಾಧ್ಯವಿಲ್ಲ.

ಅವರಿಗಾಗಿ ಉಳಿದ ಇನ್ನೊಂದು ಪ್ರಾಣಿಯಾದ ಆಡನ್ನು ಕತ್ತರಿಸಿ ಅಡುಗೆ ಮಾಡಿ ಊಣಬಡಿಸಿದರು. ಸೇರಿದ ಜನರು ಮಕ್ಕಳು ಮರಿ ಇದ್ದ ಮನೆಯಲ್ಲಿ ಪಾಷಾಣ ಇರಬಾರದು ಅದನ್ನು ಮೊದಲು ಹೊರಗೆ ಚೆಲ್ಲಿರಿ ಎಂದರು. ರೈತಮ್ಮ ಅದನ್ನು ಮೊದಲು ಹೊರಗೆ ಚಲ್ಲಿದಳು ಅದನ್ನು ಕಂಡು ಇಲಿ ಸಂತೋಷದಿಂದ ಕುಣಿದಾಡಿತು. ಸಂತೋಷ ತನ್ನ ಗೆಳೆಯರ ಮುಂದೆ ಹಂಚಿಕೊಳ್ಳಣವೆಂದರೆ ಅವರು ಇಲ್ಲ. ಇದರಿಂದ ತಿಳಿಯುವುದೆನಂದರೆ ಕಷ್ಟದಲ್ಲಿರುವವರನ್ನು ತಮ್ಮ ಕಷ್ಟತೋಡಿಕೊಂಡಾಗ ಸಹಾಯ ಮಾಡಬೇಕು ಇಲ್ಲವಾದರೆ ಸಹಾನಭೂತಿಯಾದರೂ ತೋರಿಸಬೇಕು. ಇದುವೇ ಧರ್ಮ, ಇದುವೇ ಧರ್ಮೋ ರಕ್ಷತಿ ರಕ್ಷತಃ” ಎಂದಿದ್ದಾರೆ ಅನುಭಾವಿಗಳು.

ಅಕ್ಕಮಹಾದೇವಿಯೂ ಧರ್ಮವನ್ನು ಅರಿತು ತನ್ನದೇ ಆದ ಅನುಭಾವವನ್ನು ತನ್ನ ವಚಗಳ ಮೂಲಕ ವ್ಯಕ್ತಪಡಿಸಿದ್ದಾಳೆ. ಆ ವಚನ ಹೀಗೆ ನೋಡಬಹುದು. –
ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ
ಹಲವು ಪ್ರಾಣಿಗಳ ಕೊಂದು ನಲಿನಲಿದಾಡುವ
ತನ್ನ ಮನೆಯಲೊಂದು ಶಿಶು ಸತ್ತರೆ
ಅದಕೆ ಮರಗುವಂತೆ ಅವಕೇಕೆ ಮರುಗನು
ಎಂಬುದಾಗಿ ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ
ಇದು ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು
ಜೀವಹಿಂಸೆಯ ಮಾಡುವ ಮಾದಿಗರನೇನೆಂಬೆನಯ್ಯ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply