ಹುಬ್ಬಳ್ಳಿ- 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಮೂರು ಕೋಟಿ ವೆಚ್ಚ ಖಾದಿ ಪ್ಲ್ಯಾಗ್ ಖರೀದಿ ಹಾಗೂ ಖಾದಿ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ತರುವು ಹಿನ್ನೆಲೆಯಲ್ಲಿ, ಹುಬ್ಬಳ್ಳಿ ಧಾರವಾಡದಲ್ಲಿನ ಖಾದಿ ಉದ್ಯೋಗ ಗ್ರಾಮ ಬೇಟಿ ನೀಡಿ ಮಾತನಾಡಿರುವುದಾಗಿ, ರಾಷ್ಟ್ರೀಯ ಖಾದಿ ಮತ್ತು ಗ್ರಾಮದ್ಯೋಗ ಆಯೋಗದ ಚೇರ್ಮನ್ ವಿನಯ್ ಕುಮಾರ್ ಸೆಕ್ಸೆನಾ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆದೇಶ ಹಾಗೂ ನಿರ್ದೇಶನದ ಮೇರೆಗೆ ಈ ಬಾರಿ 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಮೂರು ಕೋಟಿ ವೆಚ್ಚದ ಪ್ಲ್ಯಾಗ್ ತಯಾರಿಸುವದರ ಬಗ್ಗೆ ಚಿಂತನೆ ನಡೆಸಲಾಗಿದೆ. ಇನ್ನು ಕೊರೊನಾ ಎಂಬ ಮಹಾಮಾರಿಯಿಂದ ಅದೆಷ್ಟೋ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ನಂಬಿ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ಸಂಸ್ಥೆ ಸನ್ನದವಾಗಿದೆ. ಇನ್ನೂ ಹೆಚ್ಚು ಹೆಚ್ಚು ಖಾದಿ ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದೆ ಎಂದರು. ಖಾದಿ ಬಳಕೆಯಲ್ಲಿ ಬಹಳಷ್ಟು ಅಂದ್ರೆ ಶೇಕಡಾ 50% ರಷ್ಟು ಹೆಚ್ಚಳವಾಗಿದೆ. ಅದರ ಜೊತೆಗೆ ಕೇಂದ್ರ ಸರಕಾರ ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಮಾಡುವುದರ ಬಗ್ಗೆ ತಿಳಿದಿರುವುದರಿಂದ ರಾಷ್ಟ್ರೀಯ ಧ್ವಜವನ್ನು ನಿರ್ಮಾಣ ಮಾಡುವುದರ ಬಗ್ಗೆ, ಎಲ್ಲ ಖಾದಿ ಜಿಲ್ಲೆ ಗ್ರಾಮೋದ್ಯೋಗ ಕೇಂದ್ರ ಅಧ್ಯಕ್ಷರ ಜೊತೆ ಚರ್ಚೆ‌‌ ಮಾಡಿದ್ದೇವೆ, ಅದರ ಜೊತೆಗೆ ಜೇನು ಸಾಕಾಣಿಯ ಬಗ್ಗೆ ತರಬೇತಿ ಜೊತೆಗೆ, ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡಲು ಬಡ್ಡಿ ರಹಿತ ಸಾಲ ನೀಡುತ್ತಿದ್ದೆವೆ ಎಂದರು.

Screenshot_2021_0405_172548.jpg

Email

Sandesh Pawar

About Author

Sandesh Pawar

Leave A Reply