ಬೆಂಗಳೂರು
ಕೇಂದ್ರ ಸರ್ಕಾರದ ವಿ್ತ ಸಚಿವೆ ನಿರ್ಮಲಾ ಸೀತಾರಮನ್ ಅವರು ಇಂದು ಮಂಡಿಸಿದ ಬಜೆಟ್ ಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಈ ಮಧ್ಯೆ ಕೇಂದ್ರ ಸರ್ಕಾರ ಇಂದು ಮಂಡಿಸಿರುವುದು, ಆತ್ಮ ನಿರ್ಭರ್ ಬಜೆಟ್ ಅಲ್ಲ ಬದಲಾಗಿ ಅದು ಆತ್ಮ ಬ್ಬರ್ ಬಜೆಟ್ ಎಂದು ಮಾಜಿ ಸಿ ಎಮ ಸಿದ್ದರಾಮಯ್ಯಾ ಅವು ಹೇಳಿದ್ದಾರೆ. ಬಜಟ್ ಭಾಷನದ ಬಳಿಕ ಮಾತನಾಡಿದ ಅವರು ಇದು ಆತ್ಮಬರ್ಬರ ಬಜೆಟ್ ಆಗಿದೆ. ಇದೊಂದು ರೀತಿ ಆತ್ಮ ಬರ್ಬಾದ್ ಅಂದರೆ ನಾಶ ಎಂಬಂತಾಗಿದೆ ಎಂದು ಬಜೆಟ್ ಕುರಿತು ಕಟುವಾಗಿ ಟೀಕಿಸಿದ್ದಾರೆ.
ಕೋವಿಡ್ನಿಂದಾಗಿ ದೇಶದ ಆರ್ಥಿಕ ಸ್ಥಿತಿ ಅದೋಗತಿಗೆ ಹೋಗಿತ್ತು. ಆದ್ರೆ ಅದನ್ನ ಚೇತರಿಕೆ ಮಾಡುತ್ತಾರೆಂದು ನಾವು ಕೊಂಡಿದ್ದೆವು.. ಸಣ್ಣ, ಮಧ್ಯಮ ಕೈಗಾರಿಕೆಗಳ ಪುನಶ್ಚೇತನವೂ ಇಲ್ಲ. ಆರ್ಥಿಕ ತಜ್ಞರು ಕೊಟ್ಟ ಸಲಹೆಗಳನ್ನು ಗಾಳಿಗೆ ತೂರಿದ್ದಾರೆ. ಈ ಬಾರಿ ಕೃಷಿ ಸೆಸ್ ಅಂತ ಹೊಸದಾಗಿ ಮಾಡಿದ್ದಾರೆ. 2.5 ಇದ್ದದ್ದನ್ನ 3.5ರ ವರೆಗೆ ಹಾಕಿದ್ದಾರೆ. ಇದು ಬಡವರು ಮತ್ತು ಸಾಮಾನ್ಯ ವರ್ಗದ ಜನರಿಗೆ ಸಾಕಷ್ಟು ಹೊರೆಯಾಗಲಿದೆ. ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗ 72 ಸಾವಿರ ಕೋಟಿ ರೂಪಾಯಿ ಮನ್ನಾ ಮಾಡಿದ್ದರು. ಇವರು ಒಂದೇ ಒಂದು ರೂ. ಸಾಲ ಮನ್ನಾ ಮಾಡಿಲ್ಲ. ಕೃಷಿ ಉತ್ತೇಜನ ಮಾಡುವ ಸಲುವಾಗಿ ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದಾರೆ. ಆದ್ರೆ ದೇಶದ ರೈತರ ಹಿತವನ್ನು ಮರೆತಿದ್ದಾರೆ