ತುಮಕೂರು- ಮದುವೆ ದಿಬ್ಬಣದ ವಾಹನ ಪಲ್ಟಿಯಾದ ಪರಿಣಾಮವಾಗಿ ನಾಲ್ಕು ಜನರು ಸಾವಿಗೀಡಾದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಳಿಗೆಹಟ್ಟಿ ಗ್ರಾಮದಲ್ಲಿ ನಡೆದಿದೆ.
ಕೊರಟೆಗೆರೆಯಿಂದ ಶಿರಾದ ಬುಕ್ಕಾಪಟ್ಟಣಕ್ಕೆ ಹೊರಟಿದ್ದ ದಿಬ್ಬಣದ ವಾಹನ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮವಾಗಿ, ತಾಲ್ಲೂಕಿನ ಮೇಕೆರಹಳ್ಳಿ ಬಳಿ ಬಸ್ ಉರುಳಿ ಬಿದ್ದು ನಾಲ್ಕು ಜನರು ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ತುಮಕೂರು ತಾಲ್ಲೂಕಿನ ಬೆಟ್ಟಶಂಬಗಾನಹಳ್ಳಿಯಲ್ಲಿ ವಿವಾಹ ಮುಗಿಸಿ ಮಾಳಿಗೆಹಟ್ಟಿಯಲ್ಲಿ ನಡೆಯುವ ಆರತಕ್ಷತೆಗೆ ಬಸ್ ನಲ್ಲಿ ತೆರಳುತಿದ್ದರು. ದಂಪತಿ ಚಿತ್ತಣ್ಣ ಮತ್ತು ಭಾಗ್ಯಮ್ಮ ಮೃತರಾಗಿದ್ದಾರೆ. ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಇನ್ನು ಬಸ್ ನಲ್ಲಿ 40ರಿಂದ 50 ಜನರು ಇದ್ದರು. ಮೇಕೆರಹಳ್ಳಿ ತಿರುವಿನಲ್ಲಿ ಬಸ್ ಉರುಳಿ ಬಿದ್ದಿದೆ. ಗಾಯಾಳುಗಳಿಗೆ ಶಿರಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ತುಮಕೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ…