ಹಾವೇರಿ- ಇಂದು ಬೆಳಿಗ್ಗೆ ಹಾವೇರಿ ತಾಲ್ಲೂಕಿನ ಕನವಳ್ಳಿ ಗ್ರಾಮದ ಹತ್ತಿರ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಹತ್ತಿರದ ತುಂಗಭದ್ರಾ ಎಡದಂಡೆಯ ಕಾಲವೆಗೆ  ಬಿದ್ದು ಮೃತ ಪಟ್ಟಿರುವ ಘಟನೆ ಸಂಭವಿಸಿದೆ. ಮೃತರು ಹಾವೇರಿ ತಾಲೂಕು ನೆಗಳೂರು ಗ್ರಾಮದ ಹುಳ್ಯಾಳ ಪ್ರಕಾಶ 28ವರ್ಷ, ಹಾಗೂ ಕರೆಗೌಡ್ರ ಸಿದ್ದಪ್ಪ 50ವರ್ಷ ಎಂದು ತಿಳಿದುಬಂದಿದೆಮೃತ ಪ್ರಕಾಶ ತಂದೆ ಚನ್ನಬಸಪ್ಪ ಹುಳ್ಯಾಳ ಇವರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಇಂದು ಎಣಿಕೆ ಇರುವುದರಿಂದ ಗೆಲುವು ಕೇಳಿ ಹಾವೇರಿ ತಾಲೂಕಿನ ಕನವಳ್ಳಿ ಶ್ರೀ ಪರಮೇಶ್ವರನ ದರ್ಶನಾಶೀರ್ವಾದಕ್ಕೆ ಬಂದಿದ್ದರು. ದರ್ಶನಾಶೀರ್ವಾದ  ಪಡೆದು ಮರಳಿ ಬರುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

Leave A Reply