ಧಾರವಾಡ- ರಾಜ್ಯಕ್ಕೆ ಒಂದು ರೀತಿಯಲ್ಲಿ ಮಾರಕವಾಗುತ್ತಿರುವ ರೂಪಾಂತರ ಕರೋನಾ ವೈರಸ್‌ ಎಲ್ಲಡೆ ವ್ಯಾಪಕವಾಗಿ ಹರಡುತ್ತಾ ಎನ್ನುವ ಆತಂಕ ಜನರಲ್ಲಿ ಮನೆ ಮಾಡಿದೆ. ಇನ್ನು ವಿದೇಶದಿಂದ ಬಂದ  ಬಹುತೇಕರು ಕ್ವಾರೆಂಟೈನ್ ಮಾಡುತ್ತಾರೆ ಎನ್ನುವ ಹೆದರಿಕೆ ಇಂದ ನಾಪತ್ತೆಯಾಗುತಿದ್ದಾರೆ‌. ಇನ್ನಿ ನಿನ್ನೆ ಬ್ರಿಟನ್ ಸೇರಿ ವಿದೇಶದಿಂದ ಧಾರವಾಡಕ್ಕೆ ಬಂದಿರುವ ಒಟ್ಟು ಹತ್ತು ಜನರಲ್ಲಿ ಮತ್ತೇ ಮೂವರು ನಾಪತ್ತೆಯಾಗಿದ್ದಾರೆ‌. ಇಗಾಗಲೇ ವಿದೇಶದಿಂದ ಬಂದ ಹತ್ತು ಜನರ ಪೈಕಿ ಏಳು ಜನರಿಗೆ ಕೊರೊನಾ ತಪಾಸಣೆ ಮಾಡಲಾಗಿದ್ದು, ತಪಾಸಣೆಯಾದರ ವರದಿ ಬರುವರು ಬಾಕಿ ಇದೆ. ಅಲ್ಲದೇ ಧಾರವಾಡಕ್ಕೆ ಬಂದ ಕಲವರು ತಪ್ಪು ಮಾಹಿತಿ ನೀಡಿದ್ದಾರೆ.  ಮೂವರು ನಾಪತ್ತೆಯಾದವರು ಕೊಟ್ಟ ತನ್ನ ವಿಳಾಸದಲ್ಲಿ ಸಿಕ್ಕಿಲ್ಲ, ಹೀಗಾಗಿ ಈ ಮೂವರನ್ನು ಹುಡುಕಲು ಜಿಲ್ಲಾಡಳಿತ ಪ್ರಯತ್ನ ನಡೆಸಿದೆ. ಬ್ರಿಟನ್ ದಿಂದ ಬಂದಿದ್ದ ಒರ್ವ ನಿನ್ನೆಯವರೆಗೆ ನಾಪತ್ತೆ ಇದ್ದ. ಆ ವ್ಯಕ್ತಿ ಕಲಬುರಗಿಯಲ್ಲಿ ಪತ್ತೆಯಾಗಿದ್ದಾನೆ. ಸದ್ಯ ಆತನಿಗೆ ಕಲಬುರಗಿಯಲ್ಲೇ ಕೊರೊನಾ ತಪಾಸಣೆ ಮಾಡಿಸಲಾಗಿದ್ದು, ಆತನ ವರದಿ ಬರಬೇಕಿದೆ. ಈ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ‌ ನೀಡಿದ್ದು, ನಾಪತ್ತೆಯಾದವರನ್ನು ಹುಡುಕಿ ತಪಾಸಣೆ ಮಾಡಲಾಗುವದು ಎಂದಿದ್ದಾರೆ.

Leave A Reply