ಭಾರತದಲ್ಲಿ ಮತ್ತೆ ಬರಲಿದಿಯಾ ಟಿಕ್ ಟಾಕ್ ….!?

0

ಬೆಂಗಳೂರು  – ಭಾರಿ ಜನಪ್ರಿಯತೆ ಕಂಡಿದ್ದ ಟಿಕ್ ಟಾಕ್ ಆ್ಯಪ್ ಮತ್ತೆ ಭಾರತದಲ್ಲಿ ಆರಂಭ ಆಗಲಿದೆಯಾ ಎನ್ನುವ ವಿಚಾರ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೀಗೆ ಜನರ ಮನಸ್ಸಿನಿಂದ ಮಾಸಿ ದೂರುವಾಗಿದ್ದ ಟಿಕ್ ಟಾಕ್ ಈಗ ಮತ್ತೆ ಚರ್ಚೆಗೆ ಬರಲು ಜಾರಣ ಇದೆ. ಹೌದು ಕಳೆದ ರಾತ್ರಿಯಿಂದ ಮತ್ತೆ ಟಿಕ್ ಟಾಕ್ ಆರಂಭವಾಗಿದೆ‌. ಅದು ಚೀನಾ ಬದ್ದ ವೈರಿ ಎಂದ ಗುರುತಿಸಲ್ಪಡುವ ಅಮೇರಿಕಾದಲ್ಲಿ. ಈ ಹಿಂದಿನ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಂಡ ನಿರ್ಧಾರಕ್ಕೆ ಅಮೇರಿಕಾದ 46 ನೇ ಅಧ್ಯಕ್ಷ ಜೋ ಬೈಡಬ್ ಅವರು ಎಳ್ಳು ನೀರು ಬಿಟಿದ್ದಾರೆ.

ದೇಶದ ಆಂತರಿಕ ಭದ್ರತೆಯ ಕಾರಣ ನೀಡಿ ಚೀನಾದ ಆ್ಯಪ್ ಗಳನ್ನು ಟ್ರಂಪ್ ಸರ್ಕಾರ ಬ್ಯಾನ್ ಮಾಡಿತ್ತು, ಆದ್ರೆ ಈಗಿನ ಬೈಡನ್ ಅವರು ಟ್ರಂಪ್ ಅವರು ತೆಗೆದುಕೊಂಡು ಒಂದೊಂದೇ ನಿರ್ಧಾರವನ್ನು ಕಿತ್ತು ಹಾಕುತ್ತಿದ್ದಾರೆ. ಟ್ರಂಪ್ ಮಾಡಿದ್ದ ಒಂದೊಂದೇ  ಆದೇಶಗಳಿಗೆ ಎಳ್ಳುನೀರು ಬಿಡುತ್ತಿದ್ದಾರೆ‌. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ವೇಳೆ ‘ಟಿಕ್‌ಟಾಕ್’ ಬ್ಯಾನ್ ಮಾಡಿದ್ದರು.

ಆದರೆ ಟ್ರಂಪ್‌ ಮಾಡಿದ್ದ ಈ ಆದೇಶವನ್ನ ರದ್ದು ಮಾಡಿದ್ದು, ಟಿಕ್ ಟಾಕ್ ಪುನರ್ ಆರಂಭಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಇದರ ಜೊತೆಯಲ್ಲಿ ವಿ ಚಾಟ್ ಸೇರಿದಂತೆ ಒಟ್ಟು 8 ಆ್ಯಪ್ ಗಳಿಗೆ ಮತ್ತೆ ಸೇವೆ ಆರಂಭ ಮಾಡುವಂತೆ ಆದೇಶ ಮಾಡಲಾಗಿದೆ.‌ ಹೀಗಾಗಿ ಬಹುತೇಕ ಭಾರತೀಯ ಟಿಕ್ ಟಾಕ್ ಪ್ರತಿಭೆಗೆಳು ಭಾರತದಲ್ಲಿ ಮತ್ತೆ ಟಿಕ್ ಟಾಕ್ ಆರಂಭ ಆಗುತ್ತಾ ಎನ್ನುವ ಆಶಾ ಭಾವನೆ ಇಂದು ಎದುರು ನೋಡುತಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply