ತುಮಕೂರು‌ – ಪಾಗಲ್ ಪ್ರೇಮಿ ಒಬ್ಬ ಪ್ರೀತಿ ನೀರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕಿಯನ್ನು  ಹರಿತ ಆಯುಧದಿಂದ ಇರಿದು ಕೊಲೆಗೈದಿದ್ದಾನೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದೊಡ್ಡಗುಳ್ಳ ಗ್ರಾಮ ಹೊರವಲಯದಲ್ಲಿ ಈ  ಘಟನೆ ನಡೆದಿದ್ದಿ, ದೊಡ್ಡಗುಳ್ಳ ಗ್ರಾಮದ ನಿವಾಸಿ ಈರಣ್ಣ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಕಳೆದ ಎರಡು ವರ್ಷಗಳ ಹಿಂದೆ ಇದೇ ಗ್ರಾಮದ ಯುವತಿಯನ್ನು ಈ ಪಾಗಲ್ ಪ್ರೇಮಿ ಪ್ರೀತಿ ಮಾಡುತಿದ್ದ, ಹೀಗಾಗಿ ಪಿಯುಸಿ ಓದುತ್ತಿದ್ದ ಅಪ್ರಾಪ್ತೆ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ ಈರಣ್ಣ. ಇಂದು ಸಂಜೆ ದಾರಿಯಲ್ಲಿ ಹೋಗುವಾಗ ಆಕೆಯನ್ನು ಅಡ್ಡಗಟ್ಟಿ ತಾಳಿ ಕಟ್ಟಲು ಈರಣ್ಣ ಮುಂದಾಗಿದ್ದಾನೆ. ತಾಳಿ ಕಟ್ಟಲು ಪ್ರಯತ್ನಿಸಿದ ಈರಣ್ಣಗೆ ಅಪ್ರಾಪ್ತೆಯಿಂದ ಪ್ರತಿರೋಧ ಮಾಡಿದ ಕಾರಣ ಹರಿತವಾದ ಚಾಕುವಿನಿಂದ ಇರುದು ಯುವತಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಕಾಲುಕಿತ್ತ ಈರಣ್ಣ ತಲೆ ಮರೆಸಿಕೊಂಡಿದ್ದಾನೆ.

ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply