ಮೈಸೂರು- ರಾಜ್ಯದಲ್ಲಿ ಇಂದು ಗ್ರಾಮ ಪಂಚಾಯತಿ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು. ಅಭ್ಯರ್ಥಿಗಳಲ್ಲಿ ನಡಕ ಸುರುವಾಗಿದೆ. ಒಂದು ಕಡೆ ಕರೋನಾ ಮಾಹಾ ಮಾರಿಯ ಕಾಟ ಒಂದು ಕಡೆಯಾದ್ರೆ ಮತ್ತೊಂದು ಕಡೆಯಲ್ಲಿ ಚುನಾವಣೆ ಕಾವು ಜೋರಾಗಿದೆ. ಪೊಲೀಸ್ ಇಲಾಖೆ ಅದೆಷ್ಟೋ ಜಾಗ್ರತೆ ವಹಿಸಿದ್ರು ಜನ ಮಾತ್ರ ಕರೋನ ರೂಲ್ಸ್ ಬ್ರೆಕ್ ಮಾಡಿದ್ದಾರೆ. ಇನ್ನು ಮೈಸೂರಿನ ನಂಜನಗೂಡು ಮತ ಕೇಂದ್ರದಲ್ಲಿ‌ ಜನ ಸುನಾಮಿ ರೀತಿಯಲ್ಲಿ ಮುಗಿಬಿದಿದ್ದಾರೆ.

ಪೊಲೀಸ್ ಬ್ಯಾರಿಕೇಡ್,ಬಾಂಬ್ ನಿಷ್ಕ್ರಿಯ ದಳದ ಮೆಟೆಲ್ ಡಿಟೆಕ್ಟರ್ ಯಂತ್ರಗಳನ್ನೆ ಮುರಿದು ಎಣಿಕೆ ಕೇಂದ್ರಗಳತ್ತ ನುಗ್ಗಿದ್ದಾರಡ. ಅಭ್ಯರ್ಥಿಗಳು, ಏಜೆಂಟರ್ ನೂಕುನುಗ್ಗಾಟಕ್ಕೆ ಹೈರಾಣಾದ ಪೊಲೀಸರು. ಅಲ್ಲದೇ ಅಧಿಕಾರಿಗಳು‌‌ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು.

Leave A Reply